ಬೆಂಗಳೂರು: ವಾಲ್ಮೀಕಿ ಜಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ನಮ್ಮ ಸಮುದಾಯಕ್ಕೆ 7.5ಮೀಸಲಾತಿ ಕೊಡುತ್ತೇನೆಂದು ಭರವಸೆ ಕೊಟ್ಟಿದ್ದರು .ಆದರೆ ಅದು ಈಡೇರಲಿಲ್ಲ .ಈಗ ಮುಖ್ಯಮಂತ್ರಿಗಳಾದ ಬೊಮ್ಮಾಯಿಯವರು ಕೂಡಲೇ ಧರಣಿ ಸ್ಥಳಕ್ಕೆ ಭೇಟಿ ಕೊಟ್ಟು ನಮ್ಮ ಪೂಜೆ ಗುರುಗಳ ಹತ್ತಿರ ಹೋಗಿ . ಮೀಸಲಾತಿ ಕೊಡುತ್ತೇನೆ ಎಂದು ಘೋಷಣೆ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ರಾಜು ನಾಯಕ ಹೇಳಿದ್ದಾರೆ .
ಧರಣಿ ಸತ್ಯಾಗ್ರಹದಲ್ಲಿ ಶ್ರೀ ವಾಲ್ಮೀಕಿ ಸ್ವಾಮೀಜಿ ಹೋರಾಟಕ್ಕೆ ಬೆಂಬಲಿಸಿ ಫ್ರೀಡಂ ಪಾರ್ಕ್. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸತತ 14 ದಿನಗಳಿಂದ ನಮ್ಮ ಪೂಜ್ಯ ಗುರುಗಳು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ . ಸತತ 14ದಿನಗಳಿಂದ ಪೂಜ್ಯ ಗುರುಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಕೂಡಲೇ ರಾಜ್ಯ ಸರಕಾರ ಎಚ್ಚೆತ್ತುಕೊಂಡು ಮೀಸಲಾತಿ ಕೊಡಬೇಕು .ಇಲ್ಲದಿದ್ದರೆ ರಾಜ್ಯಾದ್ಯಂತ ನಾಯಕ ಜನಾಂಗದ. ಯುವಕರು .ಉಗ್ರ ಹೋರಾಟ ಮಾಡುತ್ತಾರೆ ಎಂದು ಎಚ್ಚರಿಸಿದರು.
ಕುಷ್ಟಗಿ ನಾಯಕ ಸಮಾಜದ ಮುಖಂಡರುರಾದ ರಮೇಶ್ ಕೊನ್ ಸಾಗರ್ .ಆಗೋಲಿ ಗ್ರಾಮದ ನಾಯಕ ಸಮಾಜದ .ಮುಖಂಡರುಗಳು. ಶರಣಪ್ಪ ಕನಕಪ್ಪ ಮಹೇಶ್ ರವಿ ಇನ್ನಿತರ ಮುಖಂಡರುಗಳು ಭಾಗವಹಿಸಿ ಗುರುಗಳಿಗೆ ಬೆಂಬಲ ಸೂಚಿಸಿದರು.