ಬೆಂಗಳೂರು: ನಾನು ಚಿಕ್ಕ ಮಗುವಾಗಿದ್ದಾಗಲೇ ಗೋಲಿ ಆಟದಲ್ಲಿ ಸೋಲನ್ನ ಒಪ್ಪಿಕೊಳ್ಳಲು ತಯಾರಿರಲಿಲ್ಲ, ಇನ್ನೂ ಈಗ ಸೋಲ್ತೀನಾ? ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರಶ್ನಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಮ್ಮ ಹೊಸ ಪಕ್ಷದ ಘೋಷಣೆ ಮಾಡುವ ವೇಳೆ ಮಾತನಾಡಿದ ಜನಾರ್ದನ ರೆಡ್ಡಿ ಚಿಕ್ಕವನಿದ್ದಾಗ ಗೋಲಿ ಆಡಬೇಕಾದ್ರೆನೇ ಸೋತಿಲ್ಲ, ಈಗ ಸೋಲ್ತೀನಾ ಎಂದಿದ್ದಾರೆ.
ಗಾಲಿ ಜನಾರ್ದನ ರೆಡ್ಡಿ ಅಧಿಕೃತವಾಗಿ ಬಿಜೆಪಿ ತೊರೆದಿದ್ದು, ಹೊಸ ಪಕ್ಷವನ್ನ ಘೋಷಣೆ ಮಾಡಿದ್ದಾರೆ. ಬಿಜೆಪಿಗೆ ಸೆಡ್ಡು ಹೊಡೆದು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ವನ್ನ ಘೋಷಣೆ ಮಾಡಿದ್ದಾರೆ.
ಈ ಮೂಲಕ ಎರಡನೇ ಬಾರಿಗೆ ರಾಜಕೀಯ ರಂಗವನ್ನ ಗಣಿಧಣಿ ಪ್ರವೇಶ ಮಾಡಿದ್ದಾರೆ. ಬೆಂಗಳೂರಲ್ಲಿ ನಡೆದ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು.. ಕಲ್ಯಾಣ ಕರ್ನಾಟಕದಿಂದ ಜನಾರ್ದನ ರೆಡ್ಡಿ ಆಟ ಶುರುವಾಗಲಿದೆ. ಸಣ್ಣ ವಯಸ್ಸಿನಲ್ಲಿ ಗೋಲಿ ಆಡುವಾಗಲೇ ನಾನು ಸೋತಿಲ್ಲ. ಇನ್ನು ಈಗ ಸೋಲ್ತೀನಾ? ಕರ್ನಾಟಕ ಅಭಿವೃದ್ಧಿಯೊಂದೇ ನನ್ನ ಗುರಿ ಎಂದು ಪ್ರಶ್ನೆ ಮಾಡಿದ್ದಾರೆ.