ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ನ್ಯಾಶನಲ್ ಎಜುಕೇಶನ್ ಫೌಂಡೇಶನ್ ಮೇಲೆ ಸಿಬಿಐ ದಾಳಿ ಮಾಡಿ ತನಿಖೆಯನ್ನು ನಡೆಸಿದ್ದಾರೆ.
ಇನ್ನೂ ಡಿ.ಕೆ.ಶಿವಕುಮಾರ್ ಬೆಳಗಾವಿಯ ಅಧಿವೇಶನಯೊಂದರಲ್ಲಿ ಪಾಲ್ಗೊಂಡಿದ್ದು ಇದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ, ಇಂದು ನಮ್ಮ ಶಿಕ್ಷಣ ಸಂಸ್ಥೆ ಮೇಲೆ ಸಿಬಿಐ ದಾಳಿ ಮಾಡಿದ್ದು, ನಮ್ಮ ಜಮೀನು, ವ್ಯವಹಾರದ ಸಂಬಂಧ ತನಿಖೆ ಮಾಡಿದ್ದಾರೆ. ಪಾಲುದಾರರಿಗೂ ನೋಟಿಸ್ ನೀಡಿ ಮಾಹಿತಿ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ನವರಿಗೆ ತೊಂದರೆ ಕೊಡುವುದೇ ಮುಖ್ಯ ಉದ್ದೇಶವಾಗಿದೆ. ಐಟಿ, ಇಡಿ, ಸಿಬಿಐ ಮೂಲಕ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.