ಬೆಳಗಾವಿ: ಮಾನವ ಬಂಧುತ್ವ ವೇದಿಕೆಯ ಮಾಜಿ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಅವರನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಅವರ ಶಿಷ್ಯ ಬಳಗದಲ್ಲಿ ಅತ್ಯಂತ ಸಂತಸದ ಸಂಗತಿಯಾಗಿದ್ದು, ತಮ್ಮ ಗುರುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ..
ಕಳೆದ 15 ವರ್ಷಗಳಿಂದ ಮಾನವ ಬಂಧುತ್ವ ವೇದಿಕೆಯ ಮೂಲಕ ರಾಜ್ಯಾದಂತ್ಯ ಹತ್ತು ಹಲವಾರು ವೈಚಾರಿಕ ವೇದಿಕೆಗಳನ್ನು ನಿರ್ಮಿಸಿ, ಮೌಢ್ಯತೆ ವಿರುದ್ಧ ನಡೆಸಿದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದರು. ಬುದ್ದ, ಬಸವ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು ಜನ ಜಾಗೃತಿ ಮೂಡಿಸುವಲ್ಲಿ ರವೀಂದ್ರ ನಾಯ್ಕರ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಮಾನವ ಬಂಧುತ್ವ ವೇದಿಕೆಯ ಮಾಜಿ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಅವರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಗುರುವಾರ ದಿನಾಂಕ 29/08/2024 ರಂದು ಮಾನವ ಬಂದುತ್ವ ವೇದಿಕೆಯ ಕೇಂದ್ರ ಕಚೇರಿಯಲ್ಲಿ ಅವರ ಶಿಷ್ಯ ವರ್ಗವಾದ, ಬರಮಣ್ಣ ತೊಳಿ, ಮಹೇಶ್ ಹೊಸೂರ, ಪ್ರಕಾಶ ಕುರಗುಂದ ಹಾಗೂ ಇನ್ನಿತರರು ಸೇರಿ ಪುಷ್ಪಗುಚ್ಚ ನೀಡುವ ಮೂಲಕ ತಮ್ಮ ನೆಚ್ಚಿನ ಗುರುಗಳಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ..
ಅದೇ ರೀತಿ ರವೀಂದ್ರ ನಾಯ್ಕರ್ ಗುರುಗಳಿಗೆ ಒದಗಿ ಬಂದ ಈ ಸ್ಥಾನಮಾನಕ್ಕಾಗಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಘಟಕ ಕೂಡಾ ಶುಭಕೋರಿ ಅಭಿನಂದಿಸಿದೆ.”
ವರದಿ ಲಕ್ಕಪ್ಪ ನಾಯ್ಕ್