ತುಮಕೂರು: ದಿನೇ ದಿನೇ ಕಾಡುಗಳು ನಾಶ ಆಗುತ್ತಿದು, ದಿನ ನಿತ್ಯ ಆಹಾರ ಅರಸಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿದು, ಇದಕ್ಕೆ ಉದಾಹರಣೆ ನೀಡುವಂತೆ ವಿದ್ಯುತ್ ಕಂಬಿ ತಗುಲಿ ಚಿರತೆಯೊಂದು ಆಕಸ್ಮಿಕವಾಗಿ ಸಾವನ್ನಪ್ಪಿದ್ದೆ.
ಗುಬ್ಬಿ ತಾಲೂಕು ಕಡಬ ಹೋಬಳಿ ಕರೆಗೊಂಡನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಗೆ ತಗುಲಿ ಆಕಸ್ಮಿಕವಾಗಿ ಚಿರತೆ ಸಾವನ್ನಪ್ಪಿದ್ದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅರಣ್ಯ ಅಧಿಕಾರಿಗಳು ಆಗಮಿಸಿ , ಪರಿಶೀಲಿಸಿದರು.
ಗುಬ್ಬಿಯಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.