ಬೆಂಗಳೂರು : ನಗರದ ರಾಮಕೃಷ್ಣ ಹೊಟೆಲ್ ನಲ್ಲಿ ಭಾರತೀಯ ದಲಿತ ಸಂಘರ್ಷ ರಾಜ್ಯ ಸಮಿತಿಯಿಂದ ರಾಜ್ಯಾಧ್ಯಕ್ಷರು ಸಮಾಜ ಸೇವಾ ರತ್ನ ಪುರಸ್ಕೃತರಾದ ಡಾ. ಪ್ರಕಾಶ್ ಬೀವರ್ ರವರ ನೇತೃತ್ವದಲ್ಲಿ ಹಾಗೂ ಡಾ. ಸುಜಾತ ರಾಜ್ಯಾಧ್ಯಕ್ಷರು ಮಹಿಳಾ ಘಟಕದ ಬೆಂಗಳೂರು ಇವರ ಭಾಗದಲ್ಲಿ ನ್ಯಾಧಿಶರಾದ ಮಲ್ಲಿಕಾರ್ಜುನ ಗೌಡರ ದಿನಾಂಕ 26-01-2022 ರಂದು ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಮಾಹಾ ನಾಯಕ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ರವರ ಭಾವಚಿತ್ರ ತೆಗಿಸಿ ಧ್ವಜಾರೋಹಣ ಮಾಡಿದ ಈ ದೇಶ ದ್ರೋಹ ಕಲಸದ ವಿರುದ್ಧ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಯಾವುದೇ ಕ್ರಮ ಜರುಗಿಸದ ನಿಲುವನ್ನು ಖಂಡಿಸಿ ಮುಂದಿನ ಹೋರಾಟದ ವಿಚಾರವಾಗಿ ಮತ್ತು ನ್ಯಾಧಿಶರಾದರ ದೇಶ ದ್ರೋಹ ಹಾಗೂ ಕರ್ತವ್ಯ ಲೋಪ ಎಸಗಿದ ಮಲ್ಲಿಕಾರ್ಜುನ ಗೌಡರ ವಿರುದ್ಧ ಈ ಹಿಂದಿನ ದಲಿತ ಸಂಘಟನೆಗಳು ಮಾಡಿದ ಹೋರಾಟವನ್ನು ಬೆಂಬಲಿಸಿ ಸುದ್ದಿ ಪ್ರಸಾರ ಮಾಡದ ಎಲ್ಲಾ ಮಾಧ್ಯಮದ ವಿರುದ್ಧವಾಗಿ ಹೋರಾಟದ ಕುರಿತು ಚರ್ಚೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧ್ಯಕ್ಷರು ಭಾಗವಹಿಸಿದ್ದರು.