ತುಮಕೂರು: ರಾಜ ವೀರ ಮದಕರಿ ನಾಯಕರ ಹಾಗೂ ಓಬವ್ವ ನಾಗತಿ 2022 ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಈ ರೀತಿ ಇದೆ.
ಬುಡಕಟ್ಟು ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕಾವೇಲ್ಲಪ್ಪ ಸ್ವಾಮಿ, ಸಂಘಟನೆ ಮತ್ತು ಹೋರಾಟ ಕ್ಷೇತ್ರದಲ್ಲಿ ತಮ್ಮದೇ ಚಾಪು ಮೂಡಿಸಿದ ಸಿಂಗಾಪುರ ವೆಂಕಟೇಶ್ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪ್ರೋ.ಟಿ.ಟಿ. ಬಸವನಗೌಡ ಮತ್ತು ಸಾಮಾಜಿಕ ಹೋರಾಟ ಕ್ಷೇತ್ರದಲ್ಲಿ ಸಾಧನೆ ಮಾಡಿ ಶ್ರವಣಕುಮಾರ ಡಿ ನಾಯಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅನಸೂಯ ಕೆಂಪನಹಳ್ಳಿ ಅವರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಇನ್ನು ಪ್ರಶಸ್ತಿ ಕಾರ್ಯಕ್ರಮವು ತುಮಕೂರಿನ ಗಾಜಿನ ಮನೆಯಲ್ಲಿ ದಿನಾಂಕ 26-11-2022 ಶನಿವಾರ ನಡೆಸಲಿದ್ದು, ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಶ್ರೀ ರಾಜವೀರ ಮದಕರಿ ನಾಯಕರ ಜಯಂತೋತ್ಸವ ಆಚರಣೆ ಸಮಿತಿಯ ಮುಖ್ಯಸ್ಥರು ಹಾಗೂ ಸದಸ್ಯರು ಕೋರಿದ್ದಾರೆ.