ದೇಶದಲ್ಲಿ ಪ್ರತಿನಿತ್ಯ 50 ಲಕ್ಷ ಕೇಸ್ ಬರುತ್ತಿದ್ದು, 0.03ರಷ್ಟು ಕೊರೊನಾ ಸಕ್ರಿಯ ಪ್ರಕರಣ ದಾಖಲಾಗಿವೆ. ರಾಜ್ಯದಲ್ಲಿ ಕೊರೊನಾ ಸಕ್ರಿಯ ಪ್ರಕರಣ ಸಂಖ್ಯೆ ಕಡಿಮೆ ಇದೆ. ಚೀನಾದಲ್ಲಿ ಪ್ರತಿದಿನವೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಚೀನಾದಲ್ಲಿ ಸೋಂಕು ಹೆಚ್ಚಾಗಲು ವ್ಯಾಕ್ಸಿನ್ ಕಾರಣವಾಗಿರಬಹುದು. ಬೇರೆ ದೇಶಗಳ ಪ್ರಕರಣ ನೋಡಿದಾಗ ನಾವು ಎಚ್ಚರ ವಹಿಸಬೇಕು.
ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಎಲ್ಲ ರಾಜ್ಯಗಳು ಎಚ್ಚರಿಕೆ ವಹಿಸಬೇಕು. ಹೊಸ ವರ್ಷಾಚರಣೆಗೆ
ಬಹಳಷ್ಟು ಜನ ಸೇರುತ್ತಾರೆ ಈ ವೇಳೆಯಲ್ಲಿ ತೀವ್ರ ನಿಗಾ ವಹಿಸುವಂತ್ತೆ ಸೂಚಿಸಿದ್ದೇವೆ.ಹೊಸ ವರ್ಷ ಆಚರಣೆಗೆ ಹೊಸ ಗೈಡ್‌ಲೈನ್ಸ್ ನೀಡುವಂತೆ ಕೇಂದ್ರ ಸೂಚಿಸಿದ್ದಾರೆ.. ಆದಷ್ಟು ಬೇಗ ಅದನ್ನು ಜನರ ಮುಂದೆ ತರುತ್ತೇವೆ ಎಂದರು.
ಡಿ.27ರಂದು ರೋಗ ನಿರ್ವಹಣೆ ಕುರಿತು ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ಮಾಡಲು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ. ಆದ್ರೆ ಜನರು ಆತಂಕ ಪಡುವ ಅಗತ್ಯವಿಲ್ಲ ಎಚ್ಚರಿಕ್ಕೆ ವಹಿಸಿದ್ದಾರೆ ಸಾಕು ನಾವು ಸುರಕ್ಷಿತವಾಗಿದೇವೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.