ತುಮಕೂರು: ಸಾ. ರಾ ಮಹೇಶ್ ತಮ್ಮ ಮನೆಗೆ ಭೇಟಿ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ನಾನು ಮತ್ತೆ ಜೆಡಿಎಸ್‌ಗೆ ವಾಪಸ್ ಹೋಗಲ್ಲ, ನನ್ನ ಫೇಸ್ ಮಾಡೋ ಧೈರ್ಯ ಕುಮಾರಸ್ವಾಮಿಗಿಲ್ಲ,ಸಾ.ರಾ ಮಹೇಶ್ ಮನೆಗೆ ಭೇಟಿ ನೀಡಿದ್ದು ಸ್ನೇಹ ಪೂರ್ವಕವಾಗಿಯಷ್ಟೇ ಎಂದಿದ್ದಾರೆ.
ತಮ್ಮನ್ನು ಉಚ್ಛಾಟಿಸಿದ ಬಗ್ಗೆಯೂ ಮಾತನಾಡಿದ ಶ್ರೀನಿವಾಸ್ ನನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಅದು ಮುಗಿದು ಹೋದ ಕತೆ, ಪಕ್ಷಕ್ಕೆ ವಾಪಸ್ ಬರಲು ನಾನು ಜಿಟಿ ದೇವೇಗೌಡ ಅಥವಾ ಶಿವರಾಮೇಗೌಡ ಅಲ್ಲ, ನಾನು ವಾಸಣ್ಣ. ನಾನು ದುಷ್ಯಂತ್ ಅಲ್ಲ, ನಮ್ಮ ಅಪ್ಪನ ಮಾತೇ ಕೇಳಲ್ಲ,ಅಲ್ಲದೇ ತಮ್ಮ ನಿರ್ಧಾರ ಬದಲಾಯಿಸುವುದಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ ಶ್ರೀನಿವಾಸ್ ನನಗೇನು ತೋಚುತ್ತೊ ಅದನ್ನೇ ಮಾಡುತ್ತೇನೆ ಎಂದಿದ್ದಾರೆ..