ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್ ವಿತರಿಸಿದ ಎಸ್ ಡಿಎಂಸಿ ಅಧ್ಯಕ್ಷ : ದೀಪಕ್ ಮುರಗುಂಡಿ

ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಎಸ್ ಡಿ ಎಂಸಿ ಅಧ್ಯಕ್ಷರಾದ ದೀಪಕ್ ಮುರಗುಂಡಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಈ ಬಾರಿ ಎಂಟನೇ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆಯನ್ನು ಮಾಡಿದರು

ಇದೇ ವೇಳೆ ಶಶಿಕಾಂತ್ ಪಡಸಲಗಿ ಗುರುಗಳು ಮಾತನಾಡಿ ವಿದ್ಯಾರ್ಥಿ ಜೀವನವು ತುಂಬಾ ಅತ್ಯಮೂಲ್ಯವಾದದ್ದು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಜೀವನ ಶೈಲಿಯನ್ನು ನೋಡಿಕೊಳ್ಳಬೇಕು ದಿನನಿತ್ಯ ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕು

ಗುರುಗಳು ಹೇಳಿದ ಪಾಠಗಳನ್ನು ಇನಮ್ರತೆಯಿಂದ ಆಲಿಸಬೇಕು ಮುಂದೆ ಬರುವ ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ತೆಗೆದು ತಂದೆ ತಾಯಿಗಳಿಗೆ ಮತ್ತು ಶಾಲೆ ಉತ್ತಮ ಹೆಸರನ್ನು ತರಬೇಕು ಎಂದು ಹೇಳಿದರು

ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶಶಿಕಾಂತ್ ಗುರೂಜಿ ಅಂತರಾಷ್ಟ್ರೀಯ ಮಟ್ಟದ ಕಾಯಕಯೋಗಿ ಪ್ರಶಸ್ತಿ ಪುರಸ್ಕೃತರು ಸನ್ಯಾಸಿಗಳು ಅಧ್ಯಾತ್ಮ ಸಂಪ್ರದಾಯ ಇಂಚಿಗೇರಿ ಮಠ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಯರಾದ ಮಜುನಾಥ ಹತ್ತಿ ಚಿದಾನಂದ ಮುಖಣಿ ಕಾಂಗ್ರೆಸ್ ಮುಖಂಡರು ಮಹದೇವ ಬಿಸಲನಾಯಕ್ ಮಾದೇವ ಮಡಿವಾಳ ಶಿಕ್ಷಕರ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಸಿಬ್ಬಂದಿ ವರ್ಗ ಊರಿನ ಹಿರಿಯರು ಉಪಸ್ಥಿತರಿದ್ದರು

ಲಕ್ಕಪ್ಪ ನಾಯ್ಕ್

Discover more from Valmiki Mithra

Subscribe now to keep reading and get access to the full archive.

Continue reading