ಪ್ರಯೋಗ ಶಾಲಾ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ.ಬಿ.ನರಸಿಂಹ ತಂದೆ ಬಿ.ಈಶ್ವರ ಇವರು ಈ ಹಿಂದೆ
ಗAಗಾವತಿ ಕೃಷಿ ಇಲಾಖೆಯಲ್ಲಿ ಸುಮಾರು ವರ್ಷಗಳಿಂದ ಸೇವೆಯನ್ನು ಸಲ್ಲಿಸಿರುತ್ತಾರೆ. ಅಲ್ಲಿಯೂ ಸಹ ಇವರು
ಸರಿಯಾದ ಸಮಯಕ್ಕೆ ಮತ್ತು ಸರಿಯಾದ ವೇಳೆಗೆ ಆಫೀಸ್‌ನಲ್ಲಿ ಕೆಲಸವನ್ನು ನಿರ್ವಹಿಸದೇ ಹಾಗೂ ಕರ್ತವ್ಯದ
ಸಮಯದಲ್ಲಿ ವಿನಾಕಾರಣ ಹೊರಗಡೆ ತಿರುಗಾಡುವುದು ಹಾಗೂ ಸರಿಯಾದ ರೀತಿಯಲ್ಲಿ ಕರ್ತವ್ಯವನ್ನು
ನಿರ್ವಹಿಸದೇ ಇರುವುದರಿಂದ ಇವರ ಮೇಲೆ ಮೇಲಾಧಿಕಾರಿಗಳು ಸಾಕಷ್ಟು ಸಲ ಕಾರಣ ಕೇಳುವ
ನೋಟೀಸ್‌ಗಳನ್ನು ನೀಡಿರುತ್ತಾರೆ. ಆದರೂ ಸಹ ಇತನು ಅಲ್ಲಿಯೇ ಸರಿಯಾದ ರೀತಿಯಲ್ಲಿ ಕರ್ತವ್ಯ
ನಿರ್ವಹಿಸದೇ ಬೇಬ್ದಾರಿತನವನ್ನು ಮಾಡಿರುತ್ತಾನೆ. ಪ್ರಯೋಗ ಶಾಲಾ ಪರಿಚಾರಕರಾಗಿ ನಿಮ್ಮ ಇಲಾಖೆಗೆ
ವರ್ಗಾವಣೆಯಾಗಿ ಬಂದಿದ್ದರು ಸಹ ಇಲ್ಲಿಯೂ ಯಾವುದೇ ಕರ್ತವ್ಯಕ್ಕೆ ಹಾಜರಾಗದೇ ನಿರ್ಲಕ್ಷತನವನ್ನು
ವಹಿಸಿದ್ದಾನೆ. ಇತನ ಮೇಲೆ ಈಗಾಗಲೇ ಮೇಲಾಧಿಕಾರಿಗಳು ಕರ್ತವ್ಯ ನಿರ್ಲಕ್ಷದ ಮೇಲೆ ಸಾಕಷ್ಟು ಸಲ
ನೋಟೀಸ್ ನೀಡಿದ್ದರು ಸಹ ಇತನ ಮೇಲೆ ಇದುವರೆಗೂ ಯಾವುದೇ ರೀತಿಯ ಕ್ರಮವನ್ನು ಜರುಗಿಸಿರುವುದಿಲ್ಲ.
ದಿನಾಂಕ : ೦೭.೦೮.೨೦೨೧ ರಂದು ಮಾನ್ಯ ಉಪ ಕೃಷಿ ನಿರ್ದೇಶಕರು ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯ
ವಡ್ಡರಹಟ್ಟಿ ಇವರಿಗೆ ಬಿ.ನರಸಿಂಹ ತಂದೆ ಬಿ.ಈಶ್ವರ ಪ್ರಯೋಗ ಶಾಲಾ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿರುವ
ಇವರ ಕರ್ತವ್ಯದ ಬೇಬ್ದಾರಿ ಮತ್ತು ಮೇಲಾಧಿಕಾರಿಗಳು ನೀಡಿರುವ ಶಿಸ್ತು ಕ್ರಮದ ನೋಟೀಸಿನ ಬಗ್ಗೆ ಇದುವರೆಗೂ
ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಂಡಿರುವುದಿಲ್ಲ. ಇದರ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು
ಖುದ್ದಾಗಿ ಭೇಟಿಯಾದರೂ ನನ್ನ ದೂರಿಗೆ ಯಾವುದೇ ರೀತಿಯ ಸ್ಪಂದನೆಯನ್ನು ಸಹ ನೀಡುತ್ತಿಲ್ಲ. ನನ್ನ ದೂರನ್ನು
ಸೂಕ್ತ ಪರಿಶೀಲಿಸಿ ಸಂಬAಧಪಟ್ಟ ಮಾನ್ಯ ಉಪ ಕೃಷಿ ನಿರ್ದೇಶಕರು ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯ
ಈ ಅಧಿಕಾರಿಗಳ ಮೇಲೆ ಮತ್ತು ಪ್ರಯೋಗ ಶಾಲಾ ಪರಿಚಾರಕರಾದ ಬಿ.ನರಸಿಂಹ ತಂದೆ ಬಿ.ಈಶ್ವರ ಇವರಗಳ
ಮೇಲೆ ಶಿಸ್ತಿನ ಕ್ರಮವನ್ನು ಜರುಗಿಸಿ ಇವರನ್ನು ಸೇವೆಯಿಂದ ಅಮಾನತ್ತು ಮಾಡಲು ಮೇಲಾಧಿಕಾರಿಗಳಿಗೆ
ಶಿಫಾರಸ್ಸು ಮಾಡಬೇಕು. ಮುಂದಿನ ದಿನಗಳಲ್ಲಿ ದಾಖಲಾತಿ ಸಹಿತ ವಾಲ್ಮೀಕಿ ಮಿತ್ರ ವರದಿ ನೀಡಲಿದೆ.
ನಿಂಗಪ್ಪ ನಾಯಕ ವರದಿಗಾರರು ವಾಲ್ಮೀಕಿ ಮಿತ್ರ :