ಪಾವಗಡ ತಾಲ್ಲೂಕು ನೀಡಗಲ್ಲು ವಾಲ್ಮೀಕಿ ಆಶ್ರಮದ ವತಿಯಿಂದ 2021 ನೇ ಸಾಲಿನ ಶ್ರಾವಣ ಮಾಸದ ಪ್ರಯುಕ್ತ ನೀಡಗಲ್ಲು ಉತ್ಸವ
ಸರ್ಕಾರದ ವತಿಯಿಂದ ಐತಿಹಾಸಿಕ ನೀಡಗಲ್ಲು ಉತ್ಸವ ಆಚರಣೆಗೆ ವಾಲ್ಮೀಕಿ ಗುರುಪೀಠದ ಪೀಠದ್ಯಾಕ್ಷ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯ
ಕರ್ನಾಟಕ ರಾಜ್ಯದ ಇಪ್ಪತ್ತೆಳು ಪಾಳೆಪಟ್ಟಗಳಲ್ಲಿ ಅತ್ಯಂತ ವೀರ ಪರಂಪರೆ ಶೌರ್ಯ ಕಲೆ ಸಾಹಿತ್ಯ ಸಂಗೀತ ಕ್ಕೆ ಹೆಸರುವಾಸಿ ನಾಡು ನೀಡಗಲ್ಲು ದುರ್ಗ ಇಲ್ಲಿನ ಪ್ರತಿ ಕಲ್ಲು ಬಂಡೆ ಕೋಟೆ ಊರಬಾಗಿಲು ಶಿಲೆಗಳು ಶಾಸನಗಳು ದೇವಸ್ಥಾನಗಳು ನೋಡಿದರೆ ನಮಗೆ ಅರ್ಥ ಆಗುತ್ತೆ ಎಂತಹ ನಾಡು ಇದು ದೇವಾಲಯಗಳ ಬೀಡು ಇದು ಕಲೆಯ ಶ್ರೀಮಂತಿಕೆಯ ಬೆಟ್ಟ ಗುಡ್ಡಗಳ ಗಿರಿ ಶಿಖರಗಳ ನಾಡು ವೈಭವದ ಬೀಡು ಇದು ಇಂತಹ ಐತಿಹಾಸಿಕ ನಾಡು ಇವತ್ತು ಕಾಲ್ಪನಿಕ ನಶಿಸಿ ಹೋಗುವ ಕಾಲಘಟ್ಟ ತಲುಪಿದೆ ಇದು ದುರಂತ ಇಂತಹ ಐತಿಹಾಸಿಕ ಸ್ಥಳಗಳನ್ನು ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಅಭಿರುದ್ದಿ ಮಾಡಬೇಕು ಇಲ್ಲಿನ ಇರಿಮೆ ಗರಿಮೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಟ್ಟಕ್ಕೆ ಬೆಳೆಸಬೇಕು ಅವಾಗ ನಮ್ಮ ಪೂರ್ವಜರ ಶ್ರಮದಾನ ಸಾರ್ಥಕ ಆಗುವುವದು ಎಂದು ಸರ್ಕಾರಕ್ಕೆ ಒತ್ತಾಯಿಸಿದರು
ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಪಾಳೆಗಾರ ಮಾತನಾಡಿ
ದೇವಾಲಗಳ ನಾಡು ರಾಜ್ಯದ ಎರಡನೇ ಹಂಪಿ ನೂರಾರು ದೇವಾಲಯಗಳ ಬೀಡು ನೀಡಗಲ್ಲು ಅಭಿರುದ್ದಿ ಮಾಡಿ ಇಡಿ ರಾಜ್ಯಕ್ಕೆ ಐತಿಹಾಸಿಕ ನೀಡಗಲ್ಲು ದುರ್ಗದ ಇತಿಹಾಸ ಸಾರುವ ಶಾಲಾ ಕಾಲೇಜುಗಳ ಪಠ್ಯ ಪುಸ್ತಕ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿವುದರ ಜೊತೆಗೆ ಭಾರತ ಸ್ವಾತಂತ್ರ್ಯಕ್ಕಿಂತ ಮುಂಚೆ ನಮ್ಮ ದೇಶದ ರಕ್ಷಣೆ ಆದ್ಯಾತ್ಮಿಕ ಚಿಂತನೆ ದೇಶ ಪ್ರೇಮ ನಾಡು ನೆಲ ಜಲ ಭಾಷೆ ರಕ್ಷಣೆ ಮಾಡಿದ ಸಾವಿರಾರು ರಾಜ ಮನೆತನಗಳ ಪರಿಶ್ರಮ ಎಷ್ಟಿದೆ ಎಂಬುದು ನಮಗೆ ಇಲ್ಲಿನ ಕೋಟೆ ದೇವಾಲಯ ಕಲ್ಯಾಣಿ ರಾಜರ ಅರಮನೆ ಶಿಲೆ ಶಾಸನಗಳು ಸಾಕ್ಷಿ ಆಗಿದೆ ಇಂತಹ ವೈಭವದ ನಾಡು ಉಳಿವಿಕೆಗೆ ಸರ್ಕಾರಗಳು ಮುಂದಾಗಬೇಕೆಂದು ಸರ್ಕಾರಕ್ಕೆ ಕರೆ ಕೊಟ್ಟರು
ವಾಲ್ಮೀಕಿ ಜಾಗೃತಿ ವೇದಿಕೆ ನೀಡಗಲ್ಲು ಹೋಬಳಿ ಅಧ್ಯಕ್ಷ ಓಂಕಾರ ನಾಯಕ ಮಾತನಾಡಿ
ಐತಿಹಾಸಿಕ ನೀಡಗಲ್ಲು ದುರ್ಗದಲ್ಲಿ ಪ್ರತಿ ಶ್ರಾವಣ ಮಾಸದಲ್ಲಿ ಕೊನೆಯ ಸೋಮವಾರದೊಂದು ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುವುದರ ಜೊತೆಗೆ ಪಕ್ಕದ ರಾಜ್ಯದ ಆಂಧ್ರ ಪ್ರದೇಶದಿಂದಲು ಸಾವಿರಾರು ಭಕ್ತರು ಆಗಮಿಸಿ ಇಲ್ಲಿನ ದೇವಾಲಯಗಳಲ್ಲಿ ಪೂಜೆ ಮಾಡಿ ತಮ್ಮ ತಮ್ಮ ಮನೆದೇವರುಗಳನ್ನು ಕರೆತಂದು ಇಲ್ಲಿನ ಕಲ್ಯಾಣಿಯಲ್ಲಿ ಜಲದಿ ಪೂಜೆ ಮಾಡಿಸಿ ಶ್ರೀ ರಾಮರ ಕಲ್ಯಾಣಿಯಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರೆ ಸರ್ವ ಇಷ್ಟಾರ್ಥ ವಾಗುವುದದೆಂದು ನಂಬಿಕೆ ಇದೆ ಆದ್ದರಿಂದ ಸಾವಿರಾರು ಭಕ್ತರು ಇಲ್ಲಿಗೆ ಬರುವುದರಿಂದ ಸರ್ಕಾರ ಇತ್ತ ಗಮನ ಹರಿಸಿ ಇಲ್ಲಿನ ದೇವಾಲಯ ಅಭಿರುದ್ದಿ ಮಾಡಿ ಬರುವ ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಜೊತೆಗೆ ಉತ್ತಮ ರಸ್ತೆ ಬರುವ ಭಕ್ತರಿಗೆ ವಸತಿ ಕೊಠಡಿ ಶೌಚಾಲಯ ಪ್ರವಾಸಿ ಮಂದಿರ ನಿರ್ಮಾಣ ಮಾಡಬೇಕು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗೆ ಒತ್ತಾಯಿಸಿದರು ಕಾರ್ಯಕ್ರಮದಲ್ಲಿ ಪಾವಗಡ ತಾಲ್ಲೋಕಿನ ಹಲವು ಸಮಾಜ ಸೇವೆಯಲ್ಲಿ ಗುರ್ತಿಸಿಕೊಂಡಿರುವ
ಹಲವು ಗಣ್ಯರನ್ನು ಮತ್ತು ಸರ್ಕಾರಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು
ಏನ್ ಅನಿಲ್ ಕುಮಾರ್ ಡಬ್ಲ್ಯೂ ಡಿ ಸಹಾಯಕ ಕಾರ್ಯಪಾಲಕರು ಪಾವಗಡ
ಶ್ರೀ ಮತಿ ದೀಪು ರಾಘವೇಂದ್ರ
ಸಮಗ್ರ ಸೇವಾಭಿರುದ್ದಿ ಸಂಸ್ಥೆ ಪಾವಗಡ
ನಾಗೇಂದ್ರ ಕುಮಾರ್
ಸಮಾಜ ಸೇವಕರು ಪಾವಗಡ
ವಿಜಿ ಪಾಳೆಗಾರ ಚಿತ್ರ ನಟರು ಪಾವಗಡ
ಕೆ ಟಿ ಹಳ್ಳಿ ನಾಗರಾಜು ರವರು ಸಂಗೀತ ಕಲಾವಿದರು
ಡಾ. ಕಿರಣ್ ತಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಪಾವಗಡ
ಮಾರಪ್ಪ ರವರು ಎ ಪಿ ಎಂ ಸಿ ಪಾವಗಡ
ಮಾನಂ ಶಶಿಕಿರಣ್
ಅಧ್ಯಕ್ಷರು ಹೆಲ್ಪ್ ಸೊಸೈಟಿ ಪಾವಗಡ
ಮಂಜುನಾಥ್ ಪಿ ಡಿ ಓ ಸಸಾಲಕುಂಟೆ
ಆರ್ ಏನ್ ಲಿಂಗಪ್ಪ ರಾಷ್ಟ್ರ ಮಟ್ಟದ ಸಂಪನ್ಮೂಲ ವ್ಯಕ್ತಿ
ಎಸ್ ಆರ್ ಪಾಳ್ಯದ ಹನುಮಂತ ರಾಯಪ್ಪ ರಾಜ್ಯಧ್ಯಕ್ಷರು ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ
ಶಿರಾ ಶಾಖದೊಡು ಗ್ರಾಮ ಅಧ್ಯಕ್ಷೆ ಮಹಾಲಕ್ಷ್ಮಿ ಲೋಕೇಶ್ ಪಾಳೆಗಾರ ಚಿತ್ತಾಗಾನ ಹಳ್ಳಿ ಚಂದ್ರು ಕನ್ನಮೆಡಿ ಸುರೇಶ ಮಾರುತೇಶ್ ಕೆ ಓಂಕಾರ ನಾಯಕ ಬಲರಾಮ್ ಮಾರಪ್ಪ ಗೋಪಾಲ ರಾಮಕೃಷ್ಣ ಅನಂತ ತಳವಾರ ಕರಿಯಣ್ಣ ಮಹಾರಾಜ್ ತಿಮ್ಮಯ್ಯ ಚಿಕ್ಕತಿಮ್ಮನಹಟ್ಟಿ ಸತೀಶ್ ಪಾಳೇಗಾರ ಭಾಸ್ಕರ್ ನಾಯಕ ಹಾಗೂ ನೂರಾರು ಭಕ್ತರು ಹಾಜರಿದ್ದರು