ಬೆಂಗಳೂರು: ನಗರದಲ್ಲಿ ಹೊಸವರ್ಷ ಆಚರಣೆಗೂ ಮುನ್ನಾ ಕೈಗೊಂಡಿರುವಂತ ಭದ್ರತೆಯನ್ನು, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪರಿಶೀಲನೆ ನೀಡಲಿದ್ದಾರೆ. ಭದ್ರತಾ ಕಾರ್ಯಗಳನ್ನು ಹೇಗೆ ಮಾಡಲಾಗಿದೆ ಎನ್ನುವುದನ್ನು ಖುದ್ಧು ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ.
ನಗರದಲ್ಲಿ ಹೊಸವರ್ಷ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸೋ ದೃಷ್ಠಿಯಿಂದ, ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಇದರ ಭಾಗವಾಗಿ ಇಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು, ಸಿಟಿ ರೌಂಡ್ಸ್ ನಡೆಸಲಿದ್ದಾರೆ.
ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರೋಡ್ ಸೇರಿದಂತೆ ಹೊಸ ವರ್ಷಾಚರಣೆಗೆ ಹೆಚ್ಚು ಜನರು ಸೇರುವ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಹೊಸ ವರ್ಷ ಆಚರಣೆಗೆ ರಾತ್ರಿ 1 ಗಂಟೆಯವರೆಗೆ ಸರ್ಕಾರ ಅನುಮತಿಸಿದೆ. ಈ ಬಳಿಕ ಬೆಂಗಳೂರು ಸೇರಿದಂತೆ ರಾಜ್ಯಾಧ್ಯಂತ ಆಚರಣೆಗೆ ಅವಕಾಶ ಇಲ್ಲ ಎಂಬುದಾಗಿ ಈಗಾಗಲೇ ಸರ್ಕಾರ ಗೈಡ್ ಲೈನ್ ನಲ್ಲಿ ತಿಳಿಸಿದೆ.
ಇದರ ಜೊತೆಯಲ್ಲಿ ಹೆಚ್ಚಿದ ಕೊರೊನಾ ಆತಂಕ ಬೆನ್ನಲೇ ಜನರಿಗೆ ಎಚ್ಚರಿಕೆ ಹಾಗೂ ಜಾಗೃತಿ ಮೂಡಿಸುವ ಕೆಲಸ ನೆಡೆಸಲಾಗುತ್ತದೆ.