ಬೆಂಗಳೂರು: ವಿಧಾನಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಂಡಿಸಿದ್ದ ವಿಧೇಯಕವನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದ ಪರ್ಯಾಲೋಚನೆಗೆ ಹಾಕಿ ವಿಧೇಯಕ ಧ್ವನಿಮತದ ಮೂಲಕ ಸರ್ವಾನುಮತದ ಅಂಗೀಕಾರಗೊಂಡಿತು.
ಬೆಂಗಳೂರು ಮಹಾನಗರದ ಭೂಸಾರಿಗೆ ಸಂಚಾರದ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ,ಹಲವು ಮಾದರಿಗಳ ಪ್ರಾಧಿಕಾರ, ಇಲಾಖೆಗಳ ಬದಲಾಗಿ ಉನ್ನತಾಧಿಕಾರದ ಒಂದೇ ಸಂಸ್ಥೆ ಸ್ಥಾಪಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಅಸ್ತಿತ್ವಕ್ಕೆ ತರಲಾಗುತ್ತಿದೆ .
ಬೆಂಗಳೂರು ಮಹಾನಗರಕ್ಕೆ ಸುತ್ತಮುತ್ತಲಿನ ಪುರಸಭೆ,ನಗರಸಭೆಗಳು ಸುಮಾರು 110 ಹಳ್ಳಿಗಳು ಸೇರ್ಪಡೆಯಾಗಿವೆ. ಹೊಸ ರಸ್ತೆಗಳ ನಿರ್ಮಾಣಕ್ಕೆ ಭೂಸ್ವಾಧೀನ ಕಾರ್ಯದ ಜವಾಬ್ದಾರಿ ಹಾಗೂ ಸಮಗ್ರ ಪರಿಹಾರ ಕಂಡುಕೊಳ್ಳಲು ವಿಧೇಯಕ ತರಲಾಗುತ್ತಿದೆ.
ಮಹಾನಗರದ ಮೂಲಸೌಕರ್ಯಗಳಿಗೂ ಗ್ರಾಮೀಣ ಮೂಲಸೌಕರ್ಯಗಳಿಗೂ ವ್ಯತ್ಯಾಸ ಇರುತ್ತದೆ. ಕಳೆದ ಸುಮಾರು 25 ವರ್ಷಗಳಿಂದ ಬೆಂಗಳೂರಿನ ರಸ್ತೆಗಳ ಅಗಲಿಕರಣವಾಗಲ್ಲ . ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂಘೈ,ಲಂಡನ್ ,ನ್ಯೂಯಾರ್ಕ್ ಮತ್ತಿತರ ನಗರಗಳ ಸಂಚಾರ ನಿರ್ವಹಣೆಯನ್ನೂ ಕೂಡ ಅಧ್ಯಯನ ಮಾಡಲಾಗುವುದು.
ಭೂಸ್ವಾಧೀನ ಕಾರ್ಯ,ಮೆಟ್ರೋ ಮಾರ್ಗದ ವಿಸ್ತರಣೆ