ರಾಜ್ಯದಲ್ಲಿ ಕೊರೊನಾದ ಹೊಸ ರೂಪಾಂತರಿ ಆತಂಕ ನಿರ್ಮಿಸಿ ಬಿಟ್ಟಿದೆ. ಎಷ್ಟೇ ಕಠಿಣ ಕ್ರಮ ಕೈಗೊಂಡಿದ್ರೂ ವಿದೇಶದಿಂದ ಆಗಮಿಸಿದ್ದ 7 ಮಂದಿಗೆ ಕೊರೊನಾ ವಕ್ಕರಿಸಿದೆ.
ಬಿಎಫ್.7 ತಳಿ, ಚೀನಾದ ಗೋಡೆ ದಾಟಿ ಬರೋಬ್ಬರಿ ದಶ ದೇಶಗಳಿಗೆ ಫಸರಿಸಿಬಿಟ್ಟಿದೆ. ಅದರಲ್ಲೂ ಭಾರತದಲ್ಲಿ 6 ಮಂದಿ ದೇಹ ಹೊಕ್ಕಿ ರಣಕೇಕೆ ಹಾಕ್ತಿರೋ ಓಮಿಕ್ರಾನ್ನ ಹೊಸ ರೂಪ, ಭಯದ ಕೋಟೆಯನ್ನೇ ನಿರ್ಮಿಸಲು ದಾಪುಗಾಲಿಟ್ಟಂತೆ ಗೋಚರವಾಗತೊಡಗಿದೆ.
ರಾಜ್ಯದ ರಾಜಧಾನಿ ಬೆಂಗಳೂರಿಗೆ ಕಾಲಿಟ್ಟ 7 ಮಂದಿಗೆ ಕೊರೊನಾ ವಕ್ಕರಿಸಿದೆ. ಬಿಎಫ್.7 ತಳಿ ಭೀತಿ ಹೊತ್ತಲ್ಲೇ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫುಲ್ ಅಲರ್ಟ್ ಮಾಡಲಾಗಿತ್ತು. ವಿದೇಶಿ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಆದ್ರೆ ಕಳೆದ 24 ಗಂಟೆಯಲ್ಲೇ ಟೆಸ್ಟ್ ಮಾಡಲಾದ 119 ಪ್ರಯಾಣಿಕರಲ್ಲಿ 7 ಮಂದಿಯ ದೇಹವನ್ನ ಕೊರೊನಾ ಹೊಕ್ಕಿದೆ.
ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುವ ಆತಂಕ ಇರೋದ್ರಿಂದ ಎಲ್ಲಾ ಜಿಲ್ಲೆಗಳಲ್ಲಿ ಆರೋಗ್ಯ ಸೌಲಭ್ಯಗಳ ಲಭ್ಯತೆ ಮಹತ್ವವಾಗಿದೆ.ರಾಜಧಾನಿ ಬೆಂಗಳೂರಿನ ವಿಕ್ಟೋರಿಯಾ ಹಾಗೂ ಸಿವಿ ರಾಮನ್ ಆಸ್ಪತ್ರೆಗಳಲ್ಲಿ ಈಗಾಗಲೇ ಆಸ್ಪತ್ರೆ ಸಿಬ್ಬಂದಿ, ವೈದ್ಯರಿಂದ ಮಾಕ್ ಡ್ರಿಲ್ಗೆ ಚಾಲನೆ ನೀಡಲಾಗಿದೆ. ಆಸ್ಪತ್ರೆಯಲ್ಲಿನ ಸಿದ್ಧತೆ ಬಗ್ಗೆ ಜಾಗೃತಿ ಹಾಗೂ ಅಣುಕು ಪ್ರದರ್ಶನ ಮಾಡಲಾಗ್ತಿದೆ.