ಚಿಕ್ಕಮಂಗಳೂರು: ಪಿಎಫ್ಐ ಕೇಸ್ ಹಿಂಪಡೆಯಿರಿ ಎಂದು ನಾವೇನು ನಿಮಗೆ ಅರ್ಜಿ ಕೊಟ್ಟಿರಲಿಲ್ಲ. ಬಜರಂಗದಳ, ರೈತಸಂಘ, ಕನ್ನಡಪರ ಸಂಘಟನೆಗಳ ಮೇಲಿನ ಕೇಸ್ ಹಿಂಪಡೆಯಿರಿ ಎಂದು ಅರ್ಜಿ ಹಾಕಿದ್ದು. ಪಿಎಫ್ಐ ಕ್ರಿಮಿನಲ್ ಎಂದು ಸಿಎಂ ಆದ ನಿಮಗೆ ಗೊತ್ತಿರಲಿಲ್ಲವಾ…? ಹೇಳಿ ನಿಮ್ಮ ಹಾಗೂ ಪಿಎಫ್ಐ-ಎಸ್ಡಿಪಿಐ ನೆಂಟಸ್ಥನ ಏನು ಅಂತ ಜಗತ್ತಿಗೆ ಗೊತ್ತಾಗುತ್ತೆ ಎಂದು ಕಾಂಗ್ರೆಸ್ ನಾಯಕರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಪಿಎಫ್ಐ ಟಾರ್ಗೆಟ್ ಮಾಡ್ತಿರೋದು ಬಜರಂಗದಳ, ಆರ್ಎಸ್ಎಸ್, ರಾಷ್ಟ್ರೀಯವಾದಿ ಸಂಘಟನೆಗಳನ್ನು. ಕಾಂಗ್ರೆಸ್, ಪಿಎಫ್ಐ, ಎಸ್ಡಿಪಿಐ ಎಲ್ಲವೂ ಆರ್ಎಸ್ಎಸ್ನ ಟಾರ್ಗೆಟ್ ಮಾಡುತ್ತೆ. ಇಬ್ಬರ ಉದ್ದೇಶ ಆರ್ಎಸ್ಎಸ್ ಟಾರ್ಗೆಟ್ ಮಾಡೋದು ಎಂದರು.
ನೆಂಟಸ್ಥನ ಇದ್ರೆ ನಿಮ್ಮಿಬ್ಬರಿಗೆ ಇರೋದು. ರಾಜ್ಯದಲ್ಲಿ ಕೋಮು ಗಲಭೆ ಹೆಚ್ಚಾಗಿದ್ರೆ, ವೈಚಾರಿಕ ಕಾರಣಕ್ಕೆ ಹತ್ಯೆಯಾಗಿದ್ರೆ ಅದಕ್ಕೆ ಸಿದ್ದರಾಮಯ್ಯ ಸರ್ಕಾರ ಕಾರಣ ಎಂದು ಆರೋಪಿಸಿದರು.