ಶಿವಮೊಗ್ಗ: ಸಿದ್ಧರಾಮೋತ್ಸವದಂತಹ ಕಾರ್ಯಕ್ರಮ ನೂರು ಮಾಡಿದ್ದೇವೆ ನಾವು. ಇತ್ತೀಚಿಗೆ ಒಂದು ಕಾರ್ಯಕ್ರಮ ಮಾಡಿ ಅದೇ ದೊಡ್ಡದು ಅವರಿಗೆ. ಒಟ್ಟಾಗಿ ಮಾಡಿದ್ದೇವೆ ಎಂದು ಹೇಳಿಕೊಳ್ಳೋದೆ ಅವರಿಗೆ ಸಂತೋಷ. ಒಟ್ಟಾಗಿ ಎನ್ನುವುದು ಅವರ ಜೀವನದಲ್ಲಿ ಗೊತ್ತಿಲ್ಲ. ಅವರು ಒಂದಾಗಿರುವ ಪ್ರಶ್ನೇಯೆ ಇಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದರು.
ಇನ್ನು ಕಾಂಗ್ರೆಸ್ ಪಕ್ಷದಲ್ಲಿದ್ದ ಆಂತರಿಕ ಗೊಂದಲ ಇದರಿಂದ ಜಾಸ್ತಿಯಾಗಿದೆ. ರಾಹುಲ್ ಗಾಂಧಿ ಮುಂದೆ ತೋರಿಸೋಕೆಗೆ ಅಪ್ಪಿಕೊಂಡಿದ್ದಾರಷ್ಟೇ. ನಾಯಕರ ಮುಂದೆ ಸರ್ಕಸ್, ಡ್ಯಾನ್ಸ್ ಮಾಡಿ ಎಂದು ಹೇಳುವ ಸ್ಥಿತಿ ಕಾಂಗ್ರೆಸ್ನದ್ದು, ರಾಜ್ಯದಲ್ಲಿ ಕಾಂಗ್ರೆಸ್ನವರ ಹಾಗೇ ಕನಸು ಯಾರಿಗೂ ಬೀಳಲ್ಲ. ಅಧಿಕಾರ ನಡೆಸುತ್ತಿದ್ದ ಇವರನ್ನು ಅಯೋಗ್ಯರು ಎಂದು ಜನ ಮನೆಗೆ ಕಳುಹಿಸಿದ್ದಾರೆ.
ಬಡವರು, ಹಿಂದುಳಿದವರ ಪರ ಇಲ್ಲ ಎಂದು ಕಿತ್ತು ಬಿಸಾಕಿದ್ದಾರೆ. ಆದರೂ, ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ನವರು ಭ್ರಮೆಯಿಂದ ಹೊರಬರಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.