ಬೆಂಗಳೂರು : ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯುತ್ತಿರುವ ಟಿ-ಟ್ವೆಂಟಿ ಸರಣಿಯ ಐದು ಪಂದ್ಯಗಳಲ್ಲಿ 2-2 ಸಮಬಲ ಸಾದಿಸಿದ್ದ ಎರಡು ತಂಡಗಳಿಗೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯದಲ್ಲಿ ಗೆಲುವು ಸಾಧಿಸಬೇಕಿತ್ತು ಆದರೆ ವರುಣನ ಆರ್ಭಟದಿಂದಾಗಿ ಅಭಿಮಾನಿಗಳು ನಿರಾಸೆ ಅನುಭವಿಸಬೇಕಾಯಿತು.
ಟಾಸ್ ಗೆದ್ದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಎದುರಾಳಿ ತಂಡಕ್ಕೆ ಬ್ಯಾಟಿಂಗ್ ಗೆ ಆಹ್ವಾನಿಸಿತು ಇದರ ನಡುವೆಯೇ ಮಳೆ ಜೋರಾಗಿ ಸುರಿಯಲಾರಂಭಿಸಿತು, ಕೊನೆಗೆ 19 ಓವರ್ ಗಳಿಗೆ ಪಂದ್ಯ ನಿಗದಿಯಾಗಿ ಪಂದ್ಯ ಆರಂಭವಾಯಿತು, ಆದರೆ ಉತ್ತಮ ದಾಳಿ ನಡೆಸಿದ ದಕ್ಷಿಣ ಆಫ್ರಿಕಾ ತಂಡದ ಬೌಲರ್ ಲುಂಗಿ ಎನ್ಗಿಡಿ ದಾಳಿಗೆ 3.3 ಓವರ್ ಗೆ ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಮತ್ತೆ ಮಳೆರಾಯನ ಆರ್ಭಟ ಹೆಚ್ಚಾದ ಕಾರಣ ಮತ್ತೆ ಪಂದ್ಯ ನಿಲ್ಲಿಸಿ ರದ್ದು ಎಂದು ಘೋಷಿಸಿದ ಪರಿಣಾಮ ಟ್ರೋಫಿಯನ್ನು ಎರಡು ತಂಡಗಳು ಹಂಚಿಕೊಂಡವು, ಮೂರು ವರ್ಷಗಳ ನಂತರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿ-20 ಪಂದ್ಯ ನಡೆಯುತ್ತಿದ್ದ ಕಾರಣ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದು ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳುವ ಸಮಯದಲ್ಲಿ ವರುಣನ ಆರ್ಭಟದಿಂದಾಗಿ ನಿರಾಸೆ ಅನುಭವಿಸಿದರು.