ಹಾಗಲಕಾಯಿಯ ಹೆಸರು ಕೇಳಿದೊಡನೆ ಅಬ್ಬಾ ಎಂದು ಮುಖ ತಿರುಗಿಸಿಕೊಳ್ಳುತ್ತೇವೆ. ಆದರೆ ಆಯುರ್ವೇದದ ಪ್ರಕಾರ, ಹಾಗಲಕಾಯಿಯ ರಸವು ತುಂಬಾ ಪ್ರಯೋಜನಕಾರಿಯಾಗಿದ್ದು, ಪ್ರತಿಯೊಬ್ಬರೂ ಇದನ್ನು ಪ್ರತಿದಿನ ಸೇವಿಸಬೇಕು ಎಂದು ಹೇಳಲಾಗುತ್ತದೆ. ಹಾಗಲಕಾಯಿಯ ರಸವು ಕೆಲವರಿಗೆ ವರದಾನವಾಗಿದೆ. ಏಕೆಂದರೆ, ಅದು ಅವರ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಮೂಲದಿಂದ ನಿರ್ಮೂಲನೆ ಮಾಡುತ್ತದೆ. ಹಾಗಿದ್ದರೆ, ಹಾಗಲಕಾಯಿಯ ರಸದ ಪ್ರಯೋಜನಗಳ ತಿಳಿಯೋಣ.
ಆಯುರ್ವೇದ ಮತ್ತು ಆರೋಗ್ಯಕರ ಜೀವನಶೈಲಿಯ ಕುರಿತು ಹಲವಾರು ಪುಸ್ತಕಗಳನ್ನು ಬರೆದಿರುವ ಡಾ. ಅಬ್ರಾರ್ ಮುಲ್ತಾನಿ, ಹಾಗಲಕಾಯಿಯ ರಸ ಅತ್ಯುತ್ತಮ ರಕ್ತ ಶುದ್ಧಿಕಾರಕ ಎಂದು ಹೇಳುತ್ತಾರೆ. ನೀವು ಪ್ರತಿದಿನ ಅರ್ಧ ಗ್ಲಾಸ್ ಹಾಗಲಕಾಯಿಯ ರಸವನ್ನು ಸೇವಿಸಿದರೆ, ನಿಮಗೆ ವಿಟಮಿನ್ ಸಿ ಯ ದೈನಂದಿನ ಅಗತ್ಯದ ಶೇಕಡಾ 93 ರಷ್ಟು ಸಿಗುತ್ತದೆ. ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಸುವಲ್ಲಿ ಇದು ಬಹಳ ಮುಖ್ಯವಾಗಿದೆ. ಇದರ ಹೊರತಾಗಿ, ಹಾಗಲಕಾಯಿಯ ರಸವು ವಿಟಮಿನ್ ಎ, ಕ್ಯಾಲ್ಸಿಯಂ, ಕಬ್ಬಿಣ, ರಿಬೋಫ್ಲಾವಿನ್, ನಿಯಾಸಿನ್, ಫೋಲಿಕ್ ಆಸಿಡ್, ಪೊಟ್ಯಾಸಿಯಮ್ ಇತ್ಯಾದಿ ಪೋಷಕಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಹೊಂದಿರುತ್ತದೆ.
ಹಾಗಲಕಾಯಿ ರಸದ ಪ್ರಯೋಜನಗಳು:
ಹಾಗಲಕಾಯಿಯ ರಸವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು.
ರೋಗಗಳಿಂದ ದೂರವಿರುತ್ತೀರಿ:
ಡಾ.ಅಬ್ರಾರ್ ಮುಲ್ತಾನಿಯವರ ಪ್ರಕಾರ, ಹಾಗಲಕಾಯಿಯ ರಸವು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವವರಿಗೆ ವರದಾನವಿದ್ದಂತೆ. ಏಕೆಂದರೆ, ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುವುದು ಎಂದರೆ ನಿಮ್ಮ ರೋಗನಿರೋಧಕ ಶಕ್ತಿ ಸಂಪೂರ್ಣವಾಗಿ ದುರ್ಬಲವಾಗಿದೆ ಎಂದರ್ಥ. ಅದನ್ನು ಬಲಪಡಿಸಲು ವಿಟಮಿನ್ ಸಿ ಅಗತ್ಯವಿದೆ ಮತ್ತು ಹಾಗಲಕಾಯಿಯಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಇರುತ್ತದೆ.
ಮಧುಮೇಹಿಗಳಿಗೂ ಇದು ವರದಾನವಾಗಿದೆ:
ಹಾಗಲಕಾಯಿಯು ಮಧುಮೇಹ ನಿರೋಧಕ ಗುಣಗಳನ್ನು ಹೊಂದಿದೆ, ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಲಕಾಯಿಯಲ್ಲಿರುವ ಸಪೋನಿನ್ಸ್ ಮತ್ತು ಟೆರ್ಪಿನಾಯ್ಡ್ಸ್ ಎಂಬ ಜೈವಿಕ ಸಕ್ರಿಯ ಸಂಯುಕ್ತಗಳು ರಕ್ತದಿಂದ ಗ್ಲೂಕೋಸ್ ಜೀವಕೋಶಗಳಿಗೆ ಪ್ರವೇಶಿಸಲು ಸಹಾಯ ಮಾಡುತ್ತದೆ. ಹಾಗಲಕಾಯಿಯ ಸೇವನೆಯು ಜೀವಕೋಶಗಳಿಂದ ಗ್ಲೂಕೋಸ್ ಅನ್ನು ಉಪಯೋಗಿಸುವಲ್ಲಿ ಸಹಾಯಕವಾಗಿದೆ.
ಚರ್ಮಕ್ಕೆ ಪ್ರಯೋಜನಕಾರಿ:
ಹಾಗಲಕಾಯಿಯ ರಸವನ್ನು ಸೇವಿಸುವುದರಿಂದ ಹೊಳೆಯುವ ಮತ್ತು ಕಲೆರಹಿತ ಮುಖಕ್ಕೆ ತುಂಬಾ ಪ್ರಯೋಜನಕಾರಿ. ಏಕೆಂದರೆ, ಹಾಗಲಕಾಯಿ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಮುಖದ ಹೊಳಪು ಹೆಚ್ಚಾಗುತ್ತದೆ.