ಆಶಿಕಾ ಅವರು ಮೂಲತಃ ಹಾಸನ ಜಿಲ್ಲೆಯವರು, ಅವರ ಅಕ್ಕ ಅನುಷಾ ರಂಗನಾಥ್ ಕೂಡ ನಟಿ ಮುಂದಿನ ದಿನಗಳಲ್ಲಿ ಕುಟುಂಬ ಸಮೇತರಾಗಿ ತುಮಕೂರಿಗೆ ಬಂದ ಅವರು ಬಿಷಪ್ ಸರಗಂಟ್ ಶಾಲೆಯಲ್ಲಿ ಅಧ್ಯಯನ ಮಾಡಿದರು, ನಂತರ ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು.
ಬೆಂಗಳೂರಿನಲ್ಲಿ ಕ್ಲೀನ್ ಮತ್ತು ಕ್ಲಿಯರ್ ಫ್ರೆಶ್ ಫೇಸ್ ಬೆಂಗಳೂರು ಸ್ಪರ್ಧೆಗಾಗಿ ಆಡಿಷನ್ ನಲ್ಲಿ ಭಾಗವಹಿಸಿ ಮಿಸ್ ಫ್ರೆಶ್ ಫೇಸ್ 2014 ರ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಫ್ರೀಸ್ಟೈಲ್, ಬೆಲ್ಲಿ ಮತ್ತು ವೆಸ್ಟರ್ನ್ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳಲ್ಲಿ ಇವರು ತರಬೇತಿ ಪಡೆದಿದ್ದಾರೆ. ಆಶಿಕಾ ಅವರು ರಂಗ್ ದೇ ಬಸಂತಿ ನಟ ಸಿದ್ಧಾರ್ಥ್ ಅವರ ಮೇಲೆ ಕ್ರಶ್ ಹೊಂದಿದ್ದರು ಎಂದು ಅವರೇ ತಿಳಿಸಿದ್ದಾರೆ.
ಕ್ರೇಜಿ ಬಾಯ್ ನಿರ್ದೇಶಕ ಮಹೇಶ್ ಬಾಬು ಆಶಿಕಾ ಅವರನ್ನು ಕ್ಲೀನ್ ಮತ್ತು ಕ್ಲಿಯರ್ ಫ್ರೆಶ್ ಫೇಸ್ ಬೆಂಗಳೂರು ಸ್ಪರ್ಧೆಯಲ್ಲಿ ಆಯ್ಕೆ ಮಾಡಿದ ನಂತರ ಆಶಿಕಾ ಅವರ ವೃತ್ತಿಜೀವನವು ಪ್ರಾರಂಭವಾಯಿತು, ಅವರು ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.
ಕ್ರೇಜಿ ಬಾಯ್ ನಂತರ ಅವಕಾಶಗಳ ಬಾಗಿಲು ತೆರೆಯಿತು, ಮಾಸ್ ಲೀಡರ್, ಮುಗುಳು ನಗೆ, ರಾಜು ಕನ್ನಡ ಮಿಡೀಯಂ , ರಾಂಬೊ 2, ತಾಯಿಗೆ ತಕ್ಕ ಮಗ, ಕೋಟಿಗೊಬ್ಬ 3, ಮದಗಜ, ಜೇಮ್ಸ್, ಅವತಾರ ಪುರುಷ ಸಿನಿಮಾದಲ್ಲಿ ನಟಿಸಿದ್ದಾರೆ, ಇವರ ಗರುಡ ಹಾಗೂ ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗುತ್ತಿದ್ದು ಅವರಿಗೆ ಮತ್ತಷ್ಟು ಅವಕಾಶಗಳು ದೊರೆತು ಯಶಸ್ಸು ದೊರೆಯಲಿ.