ಗಾಂಧಿನಗರ: ತಾಯಿಯೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ! ನಮಗೆ ಅರಸನಾದರೂ ತಾಯಿಗೆ ಮಗನೇ ಎಂಬಂತೆ ದೇಶಕ್ಕೆ ಪ್ರಧಾನ ಮಂತ್ರಿಯಾಗಿ ವಿಶ್ವದಲ್ಲಿಯೇ ದೊಡ್ಡ ನಾಯಕನಾದ ನರೇಂದ್ರ ಮೋದಿ ಅವರ ತಾಯಿಗೆ ಮಗನೆ.
ಹೌದು! ಗುಜರಾತ್ ನ ಮುಖ್ಯಮಂತ್ರಿಯಾಗಿ, ಭಾರತದ ಪ್ರಧಾನಿಯಾಗಿದ್ದರೂ ಸಹ ಗಾಂಧಿನಗರಕ್ಕೆ ಪ್ರತೀ ಬಾರಿ ಭೇಟಿ ನೀಡಿದಾಗಲೂ ಸಹ ತಾಯಿಯನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದು ಅವರ ಕೈ ತುತ್ತು ತಿನ್ನುತ್ತಾರೆ.
ಪ್ರಧಾನಿ ತಾಯಿ ಹೀರಾಬೆನ್ ಅವರು ಇಂದು 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ, ಶತಾಯುಷಿಯಾದ ತಾಯಿ ಹೀರಾಬೆನ್ ಅವರ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ, ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿರುವ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿ, ತಾಯಿಯ ಹುಟ್ಟುಹಬ್ಬವನ್ನು ಆಚರಿಸಿದರು.
ತಮ್ಮ ತಾಯಿಗೆ ಸಿಹಿ ತಿನಿಸಿ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ ಮೋದಿ ನಂತರ ತಾಯಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು, ಜನ್ಮದಿನದ ಸಂಭ್ರಮದಲ್ಲಿರುವ ಹೀರಾಬೆನ್ ಪ್ರಧಾನಿ ಮೋದಿ ಅವರಿಗೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ಪ್ರಾಪ್ತವಾಗಲಿ ಎಂದು ಹಾರೈಸಿದ್ದಾರೆ.