ರಾಜ್ ಕೋಟ್ : ಯುವ ಬೌಲರ್ ಆವೇಶ್ ಖಾನ್ ದಾಳಿಗೆ ತತ್ತರಿಸಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಪಡೆ ಯಾವುದೇ ಪ್ರತಿರೋಧ ತೋರದೆ ಭಾರತ ತಂಡದ ಬೌಲಿಂಗ್ ಗೆ ಸಂಪೂರ್ಣ ಶರಣಾಗಿ ಪೆವಿಲಿಯನ್ ಪೆರೆಡ್ ನಡೆಸಿದರು.
ಮೊದಲೆರಡು ಪಂದ್ಯಗಳಲ್ಲಿ ಜಯಗಳಿಸಿ ಸರಣಿಯ ಮೇಲೆ ಹಿಡಿತ ಸಾಧಿಸಿದ್ದ ದಕ್ಷಿಣ ಆಫ್ರಿಕಾ ತಂಡ ನಂತರದ ಎರಡು ಪಂದ್ಯಗಳಲ್ಲಿ ಸೋಲನ್ನು ಅನುಭವಿಸುವ ಮೂಲಕ ಎರಡು ತಂಡಗಳು 5 ಪಂದ್ಯಗಳ ಸರಣಿಯಲ್ಲಿ 2-2 ರ ಸಮಬಲ ಸಾಧಿಸಿದ್ದು ಜೂನ್ 19 ಭಾನುವಾರದಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದ ಮೇಲೆ ಎಲ್ಲರ ಗಮನ ಹರಿದಿದೆ.
ನಾಲ್ಕನೇ ಪಂದ್ಯದಲ್ಲಿಯೂ ಟಾಸ್ ಗೆದ್ದ ಪ್ರವಾಸಿ ತಂಡದ ನಾಯಕ ತೆಂಬು ಬವುಮಾ ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು, ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ರುತುರಾಜ್ ಗಾಯಕ್ವಾಡ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು ತಂಡದ ಮೊತ್ತ ಏಳು ರನ್ ಗಳಿಸಿದ್ದಾಗ ಈ ಸರಣಿಯ ಮೊದಲ ಪಂದ್ಯವಾಡುತ್ತಿರುವ ವೇಗದ ಬೌಲರ್ ಲುಂಗಿ ಎನಜಿಡಿಗೆ ವಿಕೆಟ್ ಒಪ್ಪಿಸಿದರು.
ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ 27 ರನ್ ಗಳಿಸಿ ಔಟ್ ಆದರೆ ಶ್ರೇಯಸ್ ಅಯ್ಯರ್ ಹಾಗೂ ನಾಯಕ ರಿಶಬ್ ಪಂತ್ ಮತ್ತೊಮ್ಮೆ ನಿರಾಸೆ ಮೂಡಿಸಿದರು, ನಂತರ ಜೊತೆಯಾದ ಉಪ ನಾಯಕ ಹಾರ್ದಿಕ್ ಪಾಂಡ್ಯ(46 ರನ್) ಹಾಗೂ ಅನುಭವಿ ಆಟಗಾರ ದಿನೇಶ್ ಕಾರ್ತಿಕ್(55 ರನ್) ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸುವ ಮೂಲಕ ತಂಡದ ಮೊತ್ತ 169 ಸೇರಿಸಿದರು.
ನಂತರ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲಿಯೇ ವೈಫಲ್ಯ ಅನುಭವಿಸಿತು ತಂಡದ ನಾಯಕ ತೆಂಬು ಬವುಮಾ ಗಾಯದಿಂದಾಗಿ ಹೊರನಡೆದರು, ಕ್ವಿಂಟನ್ ಡಿ ಕಾಕ್ ಹಾಗೂ ಪ್ರಿಟೋರಿಯಸ್ ನಡುವೆ ಸಮನ್ವಯ ಸಾಧ್ಯವಾಗದಿದ್ದಾಗ ಡಿಕಾಕ್ ರನೌಟ್ ಆಗುವ ಮೂಲಕ ವಾಪಸ್ ಆದರು.
ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಹರ್ಷಲ್ ಪಟೇಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು, ಪ್ರಿಟೋರಿಯಸ್, ಡುಸೇನ್ ಹಾಗೂ ಕ್ಲಾಸೆನ್ ಮಿಂಚಲಿಲ್ಲ, ಭಾರತದ ಬೌಲರ್‌ಗಳ ಶಿಸ್ತಿನ ದಾಳಿಗೆ ಸಿಲುಕಿದ ಪರಿಣಾಮ 88 ರನ್ ಗಳ ಅಂತರದ ಜಯ ಸಾಧಿಸಿತು, ಆವೇಶ್ ಖಾನ್ 4 ವಿಕೆಟ್ ಪಡೆದರೆ ಹರ್ಷಲ್ ಪಟೇಲ್ ಹಾಗೂ ಚಹಲ್ ಎರಡು ವಿಕೆಟ್ ಪಡೆದರು.