ಮಂಡ್ಯ: ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಅಂಚನಹಳ್ಳಿಯಲ್ಲಿ ಬಿರುಗಾಳಿ ಮಳೆಗೆ ತೆಂಗಿನಮರಗಳು ಧರೆಗುರುಳಿವೆ.
ಅಂಚನಹಳ್ಳಿ ಗ್ರಾಮದ ಈರಜಮ್ಮ ಎಂಬುವವರಿಗೆ ಸೇರಿದ ಜಮೀನುನಲ್ಲಿದ್ದ ಸುಮಾರು 90ಕ್ಕೂ ಹೆಚ್ಚು ತೆಂಗಿನ ಮರಗಳು ನೆಲಸಮವಾಗಿವೆ. ರೈತ ಮಹಿಳೆ ಈರಜಮ್ಮ ತೆಂಗಿನ ಮರವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದರು. ಇದೀಗ ನೆಲಸಮಗೊಂಡ ತೆಂಗಿನ ಮರದಿಂದ 40 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದ್ದು, ತೆಂಗಿನ ಮರ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.