KRS ಪಕ್ಷದ ಲಿಂಗಸುಗೂರು ತಾಲೂಕು ಘಟಕ ಉದ್ಘಾಟನೆ

ಲಿಂಗಸುಗೂರು: ತಾಲೂಕಿನ ಗುರು ಭವನದಲ್ಲಿ ನಡೆದ  ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ತಾಲೂಕು ಮಾಸಿಕ ಸಭೆ ನಡೆಯಿತು.

KRS ಪಕ್ಷದ ಜಿಲ್ಲಾಧ್ಯಕ್ಷ ವೆಂಕಟೇಶ್ ಮ್ಯಕಲದೊಡ್ಡಿ ಮಾತನಾಡಿ ಭ್ರಷ್ಟಾ ರಾಜಕೀಯ ಪಕ್ಷಗಳ  ಆಡಳಿತ ವ್ಯವಸ್ಥೆಯನ್ನು ಕಿತ್ತೊಗೆದು ರಾಜ್ಯದಲ್ಲಿ  ಸ್ವಚ್ಚ, ಪ್ರಾಮಾಣಿಕ, ಪ್ರಾದೇಶಿಕ, ಜನಪರ ರಾಜಕಾರಣಕ್ಕೆ KRS ಪಕ್ಷವನ್ನೂ ಬೆಂಬಲಿಸಬೇಕು ಹಾಗೂ ಲಿಂಗಸೂಗೂರು  ಕ್ಷೇತ್ರದ ಜನತೆ  ಬರುವ ಚುನಾವಣೆಯಲ್ಲಿ KRS ಪಕ್ಷವನ್ನು ಬೆಂಬಲಿಸಬೇಕು ಎಂದು ತಿಳಿಸಿದರು…

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವ ಘಟಕದ ಅಧ್ಯಕ್ಷ ನಿರುಪಾದಿ ಕೆ . ಗೋಮರ್ಸಿ  ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ  ಮಿತಿ ಮೀರಿದೆ. ಇದರಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ ಪೈಪೋಟಿಯ ರೀತಿಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ ಇದರಿಂದ ಬಡವ ಮತ್ತು ಮಧ್ಯಮ ವರ್ಗದ ಜನರು ತೊಂದರೆ ಅನುಭವಿಸುತ್ತಿದ್ದು ಇದನ್ನು ತಪ್ಪಿಸಿ ನೆಮ್ಮದಿಯ ಜೀವನ ನಡೆಸುವಂತಹ ವಾತಾವರಣ ನಿರ್ಮಿಸಲು ಪರ್ಯಾಯ ರಾಜಕಾರಣ ಅಗತ್ಯವಾಗಿದೆ. ಇದರ ಮಹತ್ವ ಜನರಿಗೆ ತಿಳಿಸುವುದೇ KRS ಪಕ್ಷದ ಪ್ರಮುಖ ಉದ್ದೇಶ ಎಂದು ತಿಳಿಸಿದರು.

ತಾಲೂಕ ಅಧ್ಯಕ್ಷ  ದುರಗಪ್ಪ ಹೊನ್ನಳ್ಳಿ ಮಾತನಾಡಿ KRS ಪಕ್ಷವು ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ಭ್ರಷ್ಟಾಚಾರ,ಅಧಿಕಾರಿಗಳ, ದುರಾಡಳಿತ ವಿರುದ್ಧ ಹಾಗೂ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತಿದೆ.ಈ ನಿಟ್ಟಿನಲ್ಲಿ ರಾಜಕೀಯ ಕ್ಷೇತ್ರದಲ್ಲಿ ಸುಧಾರಣೆಗೆ ಒತ್ತು ನೀಡಿದ್ದು ಮುಂದಿನ 2023 ರ ವಿಧಾನ ಸಭಾ ಚುನಾವಣೆಗೆ ಮೊದಲ ಹಂತದಲ್ಲಿ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಲಿಂಗಸುಗೂರು ತಾಲೂಕಿನ ಪದಾಧಿಕಾರಿಗಳ ಪಟ್ಟಿ  ತಾಲೂಕ ಯುವ ಘಟಕದ ಅಧ್ಯಕ್ಷರಾಗಿ ವೀರೇಶ ಗೌಡ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷನ್ನಾಗಿ ಅಮರೇಶ 5 ಭಾವೀ ಅವರನ್ನು ನೇಮಕ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ PS ಗುರುವಿನಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ನಝೀರ್, ಗೌರವಾಧ್ಯಕ್ಷ ಆದಪ್ಪ  ಜಿಲ್ಲಾ  SC ST ಘಟಕದ ಅಧ್ಯಕ್ಷ  ಚನ್ನಬಸವ ಕುಣೆ ಕೆಲ್ಲುರು ,ಮಸ್ಕಿ ತಾಲೂಕು ಅಧ್ಯಕ್ಷ ಮಲ್ಲಯ್ಯ ಸ್ವಾಮಿ, ಸಿಂಧನೂರು ತಾಲೂಕ ಅಧ್ಯಕ್ಷ ವೀರಭದ್ರಯ್ಯ ಸ್ವಾಮಿ, ದೇವದುರ್ಗ ತಾಲೂಕ ಅಧ್ಯಕ್ಷ ಪ್ರಕಾಶ್ ಪಾಟೀಲ್ ,ಜಿಲ್ಲಾ ಯುವ ಮೋರ್ಚಾ ಸಂಘಟನಾ ಕಾರ್ಯದರ್ಶಿ ಮಲ್ಲನಗೌಡ ಗೊರೆಬಾಳ ಹಾಗೂ  ಜಿಲ್ಲಾ ಪದಾಧಿಕಾರಿಗಳು ಹಾಗೂ ಲಿಂಗಸೂಗೂರು ತಾಲೂಕು ಬಸವರಾಜಯ್ಯ ಸ್ವಾಮಿ, ಚೇತನ್ ಕುಮಾರ್ ,ನಾಗರಾಜ,ಚಂದಪ್ಪಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading