ಉದ್ಘಾಟನೆಯಾದ 2ದಿನಕ್ಕೆ ಮುರಿದು ಹೋದ ಮಲ್ಪೆಯ ತೇಲುವ ಸೇತುವೆ

ಉಡುಪಿ:  ರಾಜ್ಯದಲ್ಲೇ ಮೊದಲ ಬಾರಿಗೆ ನಿರ್ಮಾಣವಾಗಿದ್ದ ತೇಲುವ ಸೇತುವೆ, ಮಲ್ಪೆ ಬೀಚ್ ಪ್ರಮುಖ ಆಕರ್ಷಣೆಯಾಗುವ ಹಂತದಲ್ಲಿತ್ತು. ಸದ್ಯ ಸೇತುವೆಗೆ ಅಳವಡಿಸಲಾದ ತೇಲುವ ಇಂಟರ್ ಲಾಕಿಂಗ್ ಪ್ಲೇಟ್ ನಿರಂತರವಾಗಿ ಹೊಡೆಯುವ ಅಲೆಗಳ ರಭಸಕ್ಕೆ ಮುರಿದು ದಡ ಸೇರಿವೆ. ಸಮುದ್ರದ ತೆರೆಗಳ ಮೇಲೆ ತೇಲಿ ಸಾಗುವ ಹಾಗಿದ್ದ ಸೇತುವೆ ಈಗ ಅಲೆಗಳ ರಭಸ ತಡೆದುಕೊಳ್ಳಲಾಗದೇ ಮುರಿದು ಹೋಗಿದೆ.

ಕಳೆದ ಶುಕ್ರವಾರವಷ್ಟೇ ಮಲ್ಪೆ ಬೀಚ್ನಲ್ಲಿ ನಿರ್ಮಾಣವಾಗಿದ್ದ ತೇಲುವ ಸೇತುವೆಯನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿದ್ದರು.

100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲವಿರುವ ತೇಲುವ ಸೇತುವೆ ಇದಾಗಿದ್ದು, ಕರ್ನಾಟಕವನ್ನು ಹೊರತುಪಡಿಸಿದರೆ ಕೇರಳ ರಾಜ್ಯದ ಬೇಫೂರ್ ಬೀಚ್ನಲ್ಲಿ ಈಗಾಗಲೇ ತೇಲುವ ಸೇತುವೆಯನ್ನು ಪ್ರವಾಸಿಗರ ಆಕರ್ಷಣೆ ಗೋಸ್ಕರ ನಿರ್ಮಿಸಲಾಗಿತ್ತು. ಸದ್ಯ ಸೇತುವೆಯ ದುರಸ್ಥಿ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ಪ್ರವಾಸಿಗರ ಬಳಕೆಗೆ ತೇಲುವ ಸೇತುವೆ ಮತ್ತೆ ಲಭ್ಯವಾಗಲಿದೆ ಎನ್ನಲಾಗಿದೆ.

Discover more from Valmiki Mithra

Subscribe now to keep reading and get access to the full archive.

Continue reading