ಬೆಂಗಳೂರು: 545 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಹೊರಡಿಸಲಾಗಿದ್ದಂತ ಅಧಿಸೂಚನೆಯ ಪರೀಕ್ಷೆಯಲ್ಲಿ ಅಕ್ರಮದ ಕಾರಣ, ಸರ್ಕಾರ ಪರೀಕ್ಷೆ ರದ್ದು ಮಾಡಿ, ಮರು ಪರೀಕ್ಷೆಗೆ ಆದೇಶಿಸಿದೆ. ಈ ಪ್ರಕರಣವನ್ನು ಸಿಐಡಿ ತನಿಖೆ ಕೂಡ ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ತಡವಾಗುವ ಕಾರಣ, ವಯೋನಿವೃತ್ತಿ ಹೊಂದಲಿರುವ, ವಯೋ ನಿವೃತ್ತಿ ಅಂಚಿನಲ್ಲಿರುವಂತ ಎಎಸ್ಐಗಳಿಗೆ ಪಿಎಸ್ಐ ಹುದ್ದೆಗಳಿಗೆ ಮುಂಬಡ್ತಿ ನೀಡುವಂತೆ ಸರ್ಕಾರ ಆದೇಶಿಸಿದೆ. ಈ ಮೂಲಕ ಎಎಸ್ಐಗಳಿಗೆ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಡೈರೆಕ್ಟರ್ ಜನರಲ್ ಮತ್ತು ಇನ್ಸ್ ಫೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರವೀಣ್ ಸೂದ್ ಅವರು ಸುತ್ತೋಲೆ ಹೊರಡಿಸಿದ್ದು, ಪಿಎಸ್ಐ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಸ್ವಲ್ಪ ತಡವಾಗುವ ಸಂಭವವಿದೆ. ಈ ಹಿನ್ನಲೆಯಲ್ಲಿ ಹುದ್ದೆಯಾಧಾರಿತ ಪದ್ಧತಿ ಅಡವಡಿಸಿ, ತಮ್ಮ ವಲಯ, ಕಮೀಷನರೇಟ್ ಘಟಕಗಳಲ್ಲಿನ ಎಲ್ಲಾ ಮುಂಬಡ್ತಿ ಹುದ್ದೆಗಳಿಗೆ ಕೂಡಲೇ ಜೇಷ್ಠತೆ ಅನುಸಾರ ಮುಂಬಡ್ತಿ ನೀಡುವಂತೆ ಸೂಚಿಸಿದ್ದಾರೆ.
ಇನ್ನು ಒಂದು ವರ್ಷದ ಅವಧಿಯಲ್ಲಿ ವಯೋ ನಿವೃತ್ತಿ ಹೊಂದಲಿರುವ, ವಯೋಮಿತಿ ಅಂಚಿನಲ್ಲಿರುವ ಎಎಸ್ಐ ಗಳು ಲಭ್ಯವಿದ್ದು, ಮುಂಬಡ್ತಿ ಹುದ್ದೆಗಳು ಇಲ್ಲದಿದ್ದಲ್ಲಿ, ಅಂತಹ ಸಿಬ್ಬಂದಿಗಳಿಗೆ ಸಂಬಂಧಪಟ್ಟ ಹುದ್ದೆಯ ಜೇಸ್ಠತಾ ಪಟ್ಟಿಯಲ್ಲಿ ಮತ್ತು ಮುಂಬಡ್ತಿ ಪರಿಗಣಿಸುವ ತೃಪ್ತಿಕರ ಸೇವೆಯನ್ನು ಆಧರಿಸಿಕೊಂಡು, ನಿಯಮಾನುಸಾರ ನೇರ ನೇಮಕಾತಿ ಹುದ್ದೆಗಳಿಗೆ ಎದುರಾಗಿ ತಾತ್ಕಾಲಿಕವಾಗಿ ಸ್ವತಂತ್ರ ಪ್ರಭಾರದಲ್ಲಿರಿಸಲು ಕ್ರಮ ಜರುಗಿಸುವಂತೆ ತಿಳಿಸಿದ್ದಾರೆ.
ಸ್ವತಂತ್ರ ಪ್ರಭಾರವು ತಾತ್ಕಾಲಿಕವಾಗಿದ್ದು, ಯಾವುದೇ ಜೇಷ್ಟತೆ ಮತ್ತು ಪೂರ್ವಾನ್ವಯವಾಗುವ ಮುಂಬಡ್ತಿ ಹಕ್ಕೊತ್ತಾಯ ಮಾಡುವಂತಿಲ್ಲವೆಂಬ ಹಾಗೂ ನೇರ ನೇಮಕಾತಿ ಅಭ್ಯರ್ಥಿಗಳು ವರದಿ ಮಾಡಿದ ಕೂಡಲೇ ಸ್ವತಂತ್ರ ಪ್ರಭಾರದ ಮುಂಬಡ್ತಿಯು ರದ್ದುಗೊಳ್ಳಲ್ಪಡುತ್ತದೆ ಎಂಬ ಅಂಶವನ್ನು ಸಿಬ್ಬಂದಿಯವರ ಗಮನಕ್ಕೆ ತಂದು, ಅವರಿಂದ ಲಿಖಿತ ಒಪ್ಪಿಗೆ ಪತ್ರ, ಮುಚ್ಚಳಿಕ ಪತ್ರ ಪಡೆದ ನಂತ್ರ ಸ್ವತಂತ್ರ ಪ್ರಭಾರದಲ್ಲಿರಿಸುವ ಕ್ರಮ ಕೈಗೊಳ್ಳುವಂತೆ