ಹುಟ್ಟುಹಬ್ಬಕ್ಕೆ ಬಂತು ಸೋಲ್ ಆಫ್ ‘ಪೆಪೆ’…ರಕ್ತಸಿಕ್ತ ಲುಕ್ ನಲ್ಲಿ ಮಿಂಚಿದ ದೊಡ್ಮನೆ ಕುಡಿ

ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ.. ದೊಡ್ಮೆನೆ ಮೊಮ್ಮಗ.. ರಾಘವೇಂದ್ರ ರಾಜ್ ಕುಮಾರ್ ಜೇಷ್ಠ ಸುಪುತ್ರ ವಿನಯ್ ರಾಜ್ ಕುಮಾರ್ ಗಿಂದು ಹುಟ್ಟುಹಬ್ಬದ ಸಂಭ್ರಮ. ವಿನಯ್ ಬರ್ತ್ ಡೇ ಸ್ಪೆಷಲ್ ಆಗಿ ಅವರು ನಟಿಸ್ತಿರುವ ಬಹುನಿರೀಕ್ಷಿತ ಸಿನಿಮಾ ಪೆಪೆ ಚಿತ್ರ ಬಳಗದಿಂದ ಸ್ಪೆಷಲ್ ಗಿಫ್ಟ್ ವೊಂದು ಅಭಿಮಾನಿಗಳ ಮಡಿಲು ಸೇರಿದೆ.

ಹೇಗಿದೆ ಸೋಲ್ ಆಫ್ ಪೆಪೆ?

ಪೆಪೆ ಸಿನಿಮಾ ಅಂಗಳದಿಂದ ಹೊರ ಬಂದಿರುವ ಪ್ರತಿ ಝಲಕ್ ಗಳು ವಿಭಿನ್ನತೆಯಿಂದ ಕೂಡಿವೆ. ಈಗಷ್ಟೇ ವಿನಯ್ ಬರ್ತ್ ಡೇ ಗೆ ರಿಲೀಸ್ ಆಗಿರುವ ಸೋಲ್ ಆಫ್ ಪೆಪೆ ಸಿನಿಮಾ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಮಾಸ್ ಡೈಲಾಗ್ ನಿಂದ ಶುರುವಾಗುವ ಝಲಕ್ ನಲ್ಲಿ ಹಲವು ಪಾತ್ರಗಳನ್ನು ಪರಿಚಯಿಸಲಾಗಿದ್ದು, ವಿನಯ್ ರಗಡ್ ಲುಕ್ ನಲ್ಲಿ ರಕ್ತಸಿಕ್ತ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ, ಪಾತ್ರವರ್ಗದ ಅಭಿನಯದ ಅಮೋಘವಾಗಿ ಮೂಡಿ ಬಂದಿದೆ.

ಮಲೆನಾಡಿನಲ್ಲಿ ನಡೆಯುವ ಗ್ಯಾಂಗ್ ಸ್ಟರ್ ಕಥೆಯಾಗಿರುವ ಪೆಪೆ ಸಿನಿಮಾ ಸಂಪೂರ್ಣವಾಗಿ ಹಳ್ಳಿ ಸೊಗಡಿನ ಆಕ್ಷನ್ ಸಿನಿಮಾವಾಗಿದ್ದು, ಶ್ರೀಲೇಶ್‌ ಎಸ್‌. ನಾಯರ್‌ ನಿರ್ದೇಶನದ ಈ ಸಿನಿಮಾವನ್ನು ಉದಯ್‌ ಶಂಕರ್‌ ಎಸ್‌. ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣ ಸಿನಿಮಾಕ್ಕಿದೆ. ಈ ಹಿಂದಿನ ಸಿದ್ದಾರ್ಥ್, ರನ್ ಆಂಟನಿ ಸಿನಿಮಾಗಳಲ್ಲಿ ಕ್ಯೂಟ್ ಲವರ್ ಬಾಯ್ ಆಗಿದ್ದ ವಿನಯ್ ರಾಜ್ ಕುಮಾರ್ ಗ್ಯಾಂಗ್ ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ.

Discover more from Valmiki Mithra

Subscribe now to keep reading and get access to the full archive.

Continue reading