ಹುಬ್ಬಳ್ಳಿ: ಕಲ್ಲು ತೂರಾಟ ಹಾಗೂ ಗಲಭೆ ಪ್ರಕರಣದ ಆರೋಪಿಗಳ ಕುಟುಂಬಕ್ಕೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಸಹಾಯ ಹಸ್ತ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು, ಜಮೀರ್ ಅಹ್ಮದ್ಗೆ ಎಚ್ಚರಿಕೆ ನೀಡಿದ್ದಾರೆ. ಒಬ್ಬ ಜನಪ್ರತಿನಿಧಿಯಾಗಿ ಈ ರೀತಿ ದುಡ್ಡು ಕೊಡುವುದು ಎಷ್ಟು ಸರಿ..? ಹುಬ್ಬಳ್ಳಿ ಗಲಭೆಯಲ್ಲಿ ಮಾತ್ರವಲ್ಲ. ಈ ಹಿಂದೆ ಡಿಜೆ-ಕೆಜಿ ಹಳ್ಳಿಯಲ್ಲಿ ಇದೇ ರೀತಿ ಸಹಾಯ ಹಸ್ತ ಮಾಡಿದ್ದರು. ಬಂಧಿತ ಆರೋಪಿತರಿಗೆ ಇವರೆಲ್ಲ ಸಹಾಯ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.