ತುಮಕೂರು: ನಿನ್ನೆ ಮನೆಯಿಂದ ಹೊರಹೋಗಿದ್ದ ಮುತ್ತುರಾಜು ಸುಮಾರು 32 ಅಡಿ ಆಳವಿರುವ ಕೆನಾಲ್ ಈಜಲು ತೆರಳಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಜಕ್ಕೆನಹಳ್ಳಿ ಗ್ರಾಮದ ಮುತ್ತುರಾಜು(28) ಮೃತ ದುರ್ದೈವಿ.
ಘಟನಾ ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.