ಮೈಸೂರು: ಎಲ್ಲವೂ ದುಡ್ಡು–ದುಡ್ಡು ಎನ್ನುವಂತಾಗಿದೆ. ಸರ್ಕಾರಕ್ಕೆ ಒಂದು ನೇಮಕಾತಿ ಪರೀಕ್ಷೆ ನಡೆಸಲು ಆಗಲ್ಲ ಎಂದರೆ ಅದರ ಅರ್ಥ ಏನು? ವಿಜಯೇಂದ್ರ ಅವರ ಫ್ರೆಂಡ್ ಎಂದು ಒಬ್ಬರನ್ನು ಕೆಪಿಎಸ್ಸಿ ಸದಸ್ಯೆ ಮಾಡಿದ್ದಾರೆ. ಈ ರೀತಿ ಸಿಕ್ಕಸಿಕ್ಕವರನ್ನೆಲ್ಲಾ ಸದಸ್ಯರಾಗಿ ಮಾಡಿದರೆ ಇನ್ನೇನಾಗುತ್ತೆ? ಯುಪಿಎಸ್ಸಿ ಮಾದರಿಯಲ್ಲಿ ಇಲ್ಲಿ ಯಾಕೆ ಕೆಪಿಎಸ್ಸಿ ಆಡಳಿತ ಮಾಡಲು ಸಾಧ್ಯವಿಲ್ಲ? ನಮಗೆ ಯೋಗ್ಯತೆ ಇಲ್ವಾ? ಎಂದು ಎಚ್.ವಿಶ್ವನಾಥ್ ಪ್ರಶ್ನಿಸಿದರು.
ಸರ್ಕಾರ ಯಾವ ನೇಮಕಾತಿ ಪರೀಕ್ಷೆಯನ್ನು ಪ್ರಾಮಾಣಿಕವಾಗಿ ನಡೆಸುತ್ತಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ 30-40 ಲಕ್ಷ ಕೇಳುತ್ತಿದ್ದಾರೆ. ಇದೊಂದು ಭ್ರಷ್ಟ ಸರ್ಕಾರ ಅಂತ ಜನ ಹೇಳುತ್ತಾರೆ. ನಾವು ಕೂಡ ಹಾಗೇ ಭ್ರಷ್ಟ ಆಡಳಿತ ನಡೆಸುತ್ತಿದ್ದೇವೆ ಎಂದರು.