ವಿಜಯಪುರ: ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಸಂಭವಿಸಿದ ಅವಘಡದಲ್ಲಿ ಬಾಲಕ ಸಚಿನ್ ಮಹಾಂತೇಶ ಸೊನ್ನದ (14) ಸಾವನ್ನಪ್ಪಿರುವ ಘಟನೆ ವಿಜಯಪುರ ಹೊರ ವಲಯದ ಹೌಸಿಂಗ್ ಬೋರ್ಡ್ ಬಳಿ ನಡೆದಿದೆ.
ಕಳೆದ ರಾತ್ರಿ ವಿಜಯಪುರ ಹೊರ ವಲಯದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಹೌಸಿಂಗ್ ಬೋರ್ಡ್ ಬಳಿಯಿದ್ದ ತೋಟದ ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು, ತಗಡಿನ ಶೀಟ್ ಮೇಲಿದ್ದ ಕಲ್ಲು ಉರುಳಿ ಬಾಲಕನ ಮೇಲೆ ಬಿದ್ದಿದ್ದೆ. ಘಟನೆಯಲ್ಲಿ ಸಚಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.