ಒಂದೇ ಬಾರಿಗೆ ಕುವೆಂಪು ನುಡಿಸಿರಿ ಪ್ರಶಸ್ತಿ ಮತ್ತು ಕುಮಾರವ್ಯಾಸ ಪ್ರಶಸ್ತಿ ಪಡೆದುಕೊಂಡ ಬೆಟ್ಟಪ್ಪ ಕಟಾಪುರ

ಪ್ರಸಕ್ತ ಸಾಲಿನ ಕುವೆಂಪು ನುಡಿಸಿರಿ ಪ್ರಶಸ್ತಿ ಮತ್ತು ಕುಮಾರವ್ಯಾಸ ಪ್ರಶಸ್ತಿ ಎರಡು ಒಂದೇ ಬಾರಿಗೆ ಬೆಟ್ಟಪ್ಪ ಕಟಾಪುರ ಇವರಿಗೆ ಸಂದಿವೆ. ಇವರು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಜಾನಪದ ಅಧ್ಯಯನ ವಿಭಾಗದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ.

ಇವರಿಗೆ ಚೇತನ್ ಪೌಂಡೇಶನ್ ಕರ್ನಾಟಕ ಅವರ “ನಾಲ್ಕನೇ ಅಖಿಲ ಕರ್ನಾಟಕ ಚೇತನ ಸಾಹಿತ್ಯ ಸಮ್ಮೇಳನದಲ್ಲಿ  “ಕುವೆಂಪು ನುಡಿಸಿರಿ” ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ಸಮ್ಮೇಳನದ ಸಂಯೋಜಕರಾದ ಡಾ. ಚಂದ್ರಶೇಖರ ಮಾಡಲಗೇರಿ ಅವರು ನೀಡಿ ಗೌರವಿಸಿದರು.

ದಿನಾಂಕ 24/4 /2022 ರಂದು ಕನ್ನಡ ಸಾಹಿತ್ಯ ಪರಿಷತ್ತು,ಅಕ್ಕಮಹಾದೇವಿ ಸಭಾಂಗಣದಲ್ಲಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಟ್ಟಪ್ಪ ಕಟಾಪುರ ಅವರು “ನನಗೆ  ಈ ಪ್ರಶಸ್ತಿ ಗೌರವ ನೀಡಿರುವುದರಿಂದ ನನಗೆ ಜವಾಬ್ದಾರಿ ಹೋರಿಸಿದಂತಾಗೆದೆ. ಅಲ್ಲದೇ ಮುಂದಿನ ದಿನಮಾನಗಳಲ್ಲಿ ಈ ಕ್ಷೇತ್ರದಲ್ಲಿ ನನ್ನನು ನಾನು ಇನ್ನೂ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಂಡು ಕಾರ್ಯಪ್ರವೃತ್ತನಾಗುತ್ತೇನೆ ಎಂದು ತಿಳಿಸಿದರು. ಮತ್ತು ಡಾ. ವಿ. ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ (ರಿ) ಗದಗ ವತಿಯಿಂದ ರೂಪಕ ಸಾಮ್ರಾಜ್ಯದ ಚಕ್ರವರ್ತಿಯಾದ ಕುಮಾರವ್ಯಾಸ ಪ್ರಶಸ್ತಿ ಗೌರವ ನೀಡಿದರು.

ಈ ಸಮಯದಲ್ಲಿ  ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಡಾ. ವಿ. ಬಿ.  ಹಿರೇಮಠ ಅವರು ಈ ಪ್ರಶಸ್ತಿ ಗೌರವ ನೀಡಿದರು. ಆಗ ಗೌರವಾಧ್ಯಕ್ಷರಾದ  ಪರಮಪೂಜ್ಯ ಶ್ರೀ ಶ್ರೀ ಕಲ್ಲಯ್ಯಜ್ಜನವರು ಆಶೀರ್ವಾದ ಮಾಡುವ ಮೂಲಕ ಶುಭ ಆಶೀರ್ವಾದ ಮಾಡಿದರು.

ಕುವೆಂಪು ನುಡಿಸಿರಿ ಪ್ರಶಸ್ತಿ ಮತ್ತು ಕುಮಾರವ್ಯಾಸ ಪ್ರಶಸ್ತಿಗಳನ್ನು ಸ್ವೀಕರಿಸಿದ ಶ್ರೀ ಬೆಟ್ಟಪ್ಪ ಕಟಾಪುರ ಸಾ|| ಜೀರಾಳ ತಾ|| ಕನಕಗಿರಿ ಜಿ|| ಕೊಪ್ಪಳ ಪ್ರಶಸ್ತಿ ಪಡೆದ ಇವರನ್ನು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾದ ಡಾ. ಸ. ಚಿ. ರಮೇಶ, ಕುಲಸಚಿವರಾದ ಡಾ. ಸುಬ್ಬಣ್ಣ ರೈ, ಸಮಾಜ ವಿಜ್ಞಾನ ನಿಕಾಯದ ಡೀನರಾದ ಡಾ. ಸಿ. ಎಸ್. ವಾಸುದೇವನ್, ಉಪ ಕುಲಸಚಿವರಾದ ಡಾ. ಎ. ವೆಂಕಟೇಶ ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ ಬೇವಿನಕಟ್ಟಿ ಮತ್ತು ವಿಭಾಗದ ಪ್ರಾಧ್ಯಾಪಕರಾದ ಡಾ. ಮೋಹಳ್ಳಿ ಗಣೇಶ್ ಅವರು ಅಭಿನಂದಿಸಿದ್ದಾರೆ.

Discover more from Valmiki Mithra

Subscribe now to keep reading and get access to the full archive.

Continue reading