ಕರ್ನಾಟಕದಲ್ಲೂ ನಮ್ಮ ಸರ್ಕಾರ ಬರಬೇಕು: ಅರವಿಂದ್ ಕೇಜ್ರಿವಾಲ್ ಕರೆ

ದೆಹಲಿ, ಪಂಜಾಬ್ ನಲ್ಲಿ ಆಪ್ ಸರ್ಕಾರ ಇದೆ. ಕರ್ನಾಟಕದಲ್ಲೂ ನಮ್ಮ ಸರ್ಕಾರ ಬರಬೇಕು. ಇಲ್ಲಿ 40% ಸರ್ಕಾರ ಇದೆ. ದೆಹಲಿಯಲ್ಲಿ ೦% ಸರ್ಕಾರ ಇದೆ. ಈ ಸರ್ಕಾರ ಹೋಗಿ, ನಮ್ಮ ಎಎಪಿ ಸರ್ಕಾರ ಬರಬೇಕು ಎಂದು ಎಎಪಿ ಅಧ್ಯಕ್ಷ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕರೆ ನೀಡಿದ್ದಾರೆ.

 

ಇಂದು ಬೆಂಗಳೂರು ರೈತ ಸಮಾವೇಶದಲ್ಲಿ ಭಾವಹಿಸಿ ಮಾತನಾಡಿದ ಅವರು,ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಸವಾಲು ಹಾಕಿದ್ರು. ನನ್ನನ್ನ ಚುನಾವಣೆಗೆ ನಿಲ್ಲಿ ಅಂದ್ರು. ಆಗ ನನಗೆ ಆ ಶಕ್ತಿ ಇಲ್ಲ ಅಂದೆ. ಆದರೂ ಸಾಮಾನ್ಯ ಜನರಾಗಿ ನಾವು ಚುನಾವಣೆ ಎದುರಿಸಿದ್ದೇವೆ. ದೆಹಲಿ, ಪಂಜಾಬ್ ನಲ್ಲಿ ನಮ್ಮ ಸರ್ಕಾರ ಇದೆ. ಈಗ ಕರ್ನಾಟಕದಲ್ಲಿ ನಮ್ಮ ಸರ್ಕಾರ ಬರಬೇಕು ಎಂದರು.

ನಾನು ಸಾಮಾನ್ಯ ‌ಮನುಷ್ಯ, ಹೆಂಡತಿ ಮಕ್ಕಳು ಇದ್ದಾರೆ. ನನಗೆ ಸಾಮಾನ್ಯ ಜನರ ಸಮಸ್ಯೆ ಚನ್ನಾಗಿ ಗೊತ್ತಿದೆ. ಸಾಮಾನ್ಯ ಜನರಿಗೆ ಶಾಲೆ, ಆರೋಗ್ಯ ‌ಮುಖ್ಯ. ಅದನ್ನು ದೆಹಲಿಯಲ್ಲಿ ‌ಮಾಡಿದ್ದೇವೆ ಎಂದರು.

ರಾಜ್ಯದಲ್ಲಿ ಶಾಲೆ, ಆಸ್ಪತ್ರೆ ಹದಗೆಟ್ಟಿವೆ. ಅದನ್ನು ಸರಿ‌ ಮಾಡಬೇಕು. ದೆಹಲಿ ಶಾಲೆಯಲ್ಲಿ 99% ಫಲಿತಾಂಶ ಬಂದಿದೆ. ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗೆ ಬರುತ್ತಿದ್ದಾರೆ. ನೀವು ಕೂಡ ದೆಹಲಿ ಶಾಲೆ ನೋಡಿ. ಆರೋಗ್ಯ ಕ್ಷೇತ್ರ ಬಹಳ ಸುಧಾರಿಸಿದ್ದೇವೆ.

ಯಾವುದೇ ಆಪರೇಷನ್ ಅದ್ರೂ ಉಚಿತ ಸೇವೆ ಸಿಗುತ್ತೆ. ವಿದ್ಯುತ್ ಕೂಡ ಉಚಿತ ಮಾಡಿದ್ದೇವೆ. ಯಾಕಂದ್ರೆ ನಾವು ಭ್ರಷ್ಟಾಚಾರ ಮಾಡಲ್ಲ. ನಾವು ನಿಷ್ಠಾವಂತ ಸರ್ಕಾರ ನಡೆಸುತ್ತಿದೇವೆ. ಇದರಿಂದ ಸಾಕಷ್ಟು ಹಣ ಉಳಿಸಿದ್ದೇವೆ. ನಮಗೆ ರಾಜಕೀಯ ಮಾಡಲು ಬರಲ್ಲ ಕೆಲಸ ‌ಮಾತ್ರ ಮಾಡುತ್ತೇವೆ ಎಂಬುದಾಗಿ ತಮ್ಮ ಸರ್ಕಾರದ ಸಾಧನೆಯನ್ನು ಅರವಿಂದ್ ಕೇಜ್ರಿವಾಲ್ ತೆರೆದಿಟ್ಟರು.

Discover more from Valmiki Mithra

Subscribe now to keep reading and get access to the full archive.

Continue reading