ಚಳ್ಳಕೆರೆ, ಸಾರ್ವಜನಿಕರು ತಮ್ಮ ಪ್ರತಿನಿತ್ಯದ ಕೆಲಸಕಾರ್ಯಗಳಿಗೆ ಕಂದಾಯ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಕೆಲವು ದಿನಗಳ ಕಾಲ ಕಾದು ದಾಖಲಾತಿಯನ್ನು ಪಡೆಯುವಲ್ಲಿ ಅನೇಕ ರೀತಿಯ ತೊಂದರೆ ಎದುರಿಸುತ್ತಿದ್ದರು.
ಸಾರ್ವಜನಿಕರ ಪರದಾಟವನ್ನು ತಪ್ಪಿಸಲು ಸರ್ಕಾರ ಹಿಂದೆ ಸಕಾಲ ಯೋಜನೆ ಮೂಲಕ ಜನರಿಗೆ ದಾಖಲಾತಿ ಪಡೆಯುವ ವ್ಯಕ್ತಿಯನ್ನು ಸರಳೀಕರಣಗೊಳಿಸಿ ಸಕಾಲ ಯೋಜನೆ ಜನರ ನೆರವಿಗೆ ಬಂತು ಎಂದು ಶಾಸಕ ಟಿ ರಘುಮೂರ್ತಿ ತಿಳಿಸಿದರು.
ಸಕಾಲ ಯೋಜನೆಯ ದಶಮಾನೋತ್ಸವ ಕಾರ್ಯಕ್ರಮದ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು ರೈತರು ವಿದ್ಯಾರ್ಥಿಗಳು ವಾಣಿಜ್ಯೋದ್ಯಮಿಗಳು ಹಾಗೂ ಎಲ್ಲಾ ಸಾರ್ವಜನಿಕರಿಗೆ ಸಕಾಲ ಯೋಜನೆಗೆ ಅರ್ಜಿ ಸಲ್ಲಿಸಿದರೆ ಕೆಲವೇ ದಿನಗಳಲ್ಲಿ ದಾಖಲಾತಿ ಸೂಕ್ತ ಮಾಹಿತಿಯೊಂದಿಗೆ ಜನರ ಕೈಸೇರಿದೆ ಸಕಾಲ ಯೋಜನೆಯಿಂದ ಸಾರ್ವಜನಿಕ ಸಮಯ ಮತ್ತು ಆರ್ಥಿಕ ಕಡಿಮೆಯಾಗಿದೆ ಎಂದರು.
ತಾಲೂಕು ಕಚೇರಿ ಎಲ್ಲ ಸಿಬ್ಬಂದಿ ವರ್ಗ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು