ಕಾರ್ಯಕ್ರಮ ನಿರೂಪಕನಾಗಿ ಹೊಸ ಜರ್ನಿ ಆರಂಭಿಸಿದ ಮಂಜು ಪಾವಗಡ

ಕಲರ್ಸ್​ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮಕ್ಕೆ ಮಂಜು ಪಾವಗಡ ನಿರೂಪಕ ಆಗಿದ್ದಾರೆ. ಈ ಹೊಸ ಜವಾಬ್ದಾರಿ ಬಗ್ಗೆ ಅವರು ಮಾತನಾಡಿದ್ದಾರೆ. ನಟ ಮಂಜು ಪಾವಗಡ ಅವರಿಗೆ ‘ಬಿಗ್​ ಬಾಸ್​’ ರಿಯಾಲಿಟಿ ಶೋನಿಂದ ಸಖತ್​ ಜನಪ್ರಿಯತೆ ಸಿಕ್ಕಿತು.

 

ಟ್ರೋಫಿ ಗೆದ್ದ ಬೆನ್ನಲ್ಲೇ ಅವರಿಗೆ ಹಲವು ಅವಕಾಶಗಳು ಹರಿದುಬಂದವು. ಅನೇಕ ಸಿನಿಮಾಗಳಲ್ಲಿ ಮಂಜು ನಟಿಸುತ್ತಿದ್ದಾರೆ. ಈ ನಡುವೆ ಒಂದು ಹೊಸ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿದ್ದಾರೆ. ಕಲರ್ಸ್​ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮಕ್ಕೆ ಮಂಜು ಪಾವಗಡ ನಿರೂಪಕ ಆಗಿದ್ದಾರೆ. ಒಂದು ಕಾಲದಲ್ಲಿ ಆಯಂಕರ್​ಗಳ ಬಗ್ಗೆ ಅವರಿಗೆ ಬೇರೆ ಭಾವನೆ ಇತ್ತು. ಆದರೆ ಈಗ ಅವರೇ ಆಯಂಕರ್​ ಆಗಿ ಕೆಲಸ ಶುರು ಮಾಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ಇಷ್ಟು ದಿನ ನಟನೆ ಮಾಡುತ್ತಿದ್ದ ಅವರನ್ನು ಈಗ ಜನರು ನಿರೂಪಕನಾಗಿಯೂ ನೋಡಬಹುದು. ಹೊಸ ಜರ್ನಿ ಆರಂಭಿಸಿರುವ ಅವರು ಹೆಚ್ಚು ಎಗ್ಸೈಟ್​ ಆಗಿದ್ದಾರೆ.

ಸೃಜನ್​ ಲೋಕೇಶ್​ ಮತ್ತು ಹಿರಿಯ ನಟಿ ಶ್ರುತಿ ಬಗ್ಗೆಯೂ ಮಂಜು ಪಾವಗಡ ಮಾತನಾಡಿದ್ದಾರೆ.

Discover more from Valmiki Mithra

Subscribe now to keep reading and get access to the full archive.

Continue reading