ರಾಯಚೂರು: ದೇವದುರ್ಗ ತಾಲೂಕಿನ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಗಂಡುಗಲಿ ಕುಮಾರರಾಮ ಸಂಘಟನೆ ನೇತೃತ್ವದಲ್ಲಿ. ವಿಜಯನಗರ ಸಂಸ್ಥಾಪಕರಾದ ವಾಲ್ಮೀಕಿ ಸಮಾಜದ ಆಧಾರ ಸ್ತಂಭಗಳಾದ ಹಕ್ಕ-ಬುಕ್ಕರ ಜಯಂತಿಯನ್ನು ಸರಳವಾಗಿ ಪಟ್ಟಣದ ಗೌರಮ್ ಪೇಟೆಯಲ್ಲಿರುವ ಮಹರ್ಷಿ ವಾಲ್ಮೀಕಿ ಪುತ್ತಳಿಗೆ ಹಾಗೂ ಅಕ್ಕಬುಕ್ಕರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಯಂತಿ ಉದ್ದೇಶಿಸಿ ಮಾತನಾಡಿದ ಪುರಸಭೆ ಶರಣಗೌಡ ಅವರು ಹಕ್ಕ-ಬುಕ್ಕರು ವಿಜಯನಗರ ಸ್ಥಾಪಕರಾಗಿ ಕೈಗೊಂಡ ಜನಪರ ಹಾಗೂ ಆದರ್ಶ ಗುಣಗಳನ್ನು ಪ್ರತಿಯೊಬ್ಬ ಯುವಪೀಳಿಗೆ ಕಲಿಯುವಂತಾಗಲಿ ಮತ್ತು ಸಂಘಟನಾತ್ಮಕವಾಗಿ ಎಲ್ಲರಿಗೂ ತಿಳಿಸಬೇಕು. ಹಾಗೂ ಹಕ್ಕ-ಬುಕ್ಕರ ವೃತ್ತ ನಿರ್ಮಾಣಕ್ಕೆ ಸ್ಥಳ ಗುರುತು ಮಾಡಿ ಅರ್ಜಿ ಸಲ್ಲಿಸಿ ತಕ್ಷಣ ಪುರಸಭೆಯಿಂದ ಪರವಾನಿಗೆ ನೀಡಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕೂಡ್ಲಿ ಗಯ್ಯ ಗೌರ0ಪೇಟೆ ಸುರೇಶ ನಾಯಕ, ರಂಗಪ್ಪ ಗುಜಪ್ ಸಾಬಗೌಡ , ಮಸ್ಕಿ ನಾಗರಾಜ್ ಸೋಮಾಕಾರಿ, ವೆಂಕಟೇಶ್ ಸೋಮಕಾರಿ ಸಿದ್ದಪ್ಪ ಗೌರಮ್ ಪೇಟೆ, ಮಾರುತಿ ತಳವಾರ ಹಾಗೂ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸಂಘಟನೆ ಕಾರ್ಯದರ್ಶಿಗಳಾದ ಸಚ್ಚಿದಾನಂದ ನಾಯಕ ಹಾಗು ವಾಲ್ಮೀಕಿ ಸಮಾಜದ ಗುರು ಹಿರಿಯರು ಮುಖಂಡರು ಭಾಗವಹಿಸಿದ್ದರು.