ಇಂದು ಚನ್ನಗಿರಿಯಲ್ಲಿ ಸ್ವಾಭಿಮಾನಿ SC ST ಸಂಘಟನೆಗಳ ಒಕ್ಕೊಟದಿಂದ ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ SCST ನಖಲಿ ಜಾತಿ ಪ್ರಮಾಣ ಪತ್ರದ ಹಾವಳಿ ತಡೆಗಟ್ಟುವ ಸಲುವಾಗಿ ಹಾಗೂ ಹೊನ್ನಾಳಿ ಶಾಸಕ ಎಮ್.ಪಿ ರೇಣುಕಾಚಾರ್ಯ ರವರು ಮಗಳಿಗೆ SC ನಖಲಿ ಜಾತಿ ಪ್ರಮಾಣ ಕೊಡಿಸಿ ನೀಜವಾದ ಪರಿಶಿಷ್ಟ ಸಮೂದಾಯಗಳಿಗೆ ವಂಚಿಸಿರುವುದನ್ನ ವಿರೋಧಿಸಿ ಮತ್ತು ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ನ್ಯಾ. ನಾಗಮೋಹನ್ ದಾಸ್ ಅಯೋಗ ವರದಿ ಜಾರಿ ಮಾಡುವಂತೆ ವಾಲ್ಮೀಕಿ ಶ್ರಿ ಗಳು ನಡೆಸುತ್ತಿರುವ ಹೋರಾಟವನ್ನ ಬೆಂಬಲಿಸಿ. ಏಪ್ರಿಲ್ 6 ರಂದು ಚನ್ನಗಿರಿಯಲ್ಲಿ ಹೋರಾಟದ ಪೂರ್ವ ಭಾವಿ ಸಭೆ ಕರೆದು ರೋಪರೇಷಿ ಸಿದ್ಧಪಡಿಸಲು SCST ಎಲ್ಲಾ ಸಮೂದಾಯಗಳ ಮುಖಂಡರ ಸಭೆ ಕರೆದು ಚರ್ಚಿಸಲಾಯಿತು. ನಾಯಕ ಸಮಾಜದ ಅಧ್ಯಕ್ಷರಾದ ಹೊದಿಗೆರೆ ರಮೇಶ್. ಲಂಬಾಣಿ ಸಮಾಜದ ಅಧ್ಯಕ್ಷರಾದ ವಿರೇಶ್ ನಾಯ್ಕ. ಮಾದಿಗ ಸಮಾಜದ ಅಧ್ಯಕ್ಷರಾದ ಮಂಜುನಾಥ್. ಬೋವಿ ಸಮಾಜದ ಅಧ್ಯಕ್ಷರಾದ ರಾಜಣ್ಣ. ದಲಿತ ಮುಖಂಡರಾದ ಚಿತ್ರಲಿಂಗಪ್ಪ. ಪ್ರಭಕರ್. ಶಿವಲಿಂಗಪ್ಪ. ವಕೀಲರಾದ ನಾಗೇಶ್ ನಾಯ್ಕ. ಆನಂದ್. ಉಮಾಪತಿ. ರಮೇಶ್. ಮಲ್ಲ ನಾಯ್ಕ. ವಾಲ್ಮೀಕಿ ನಾಯಕ ಸಮಾಜದ ಯುವ ಮುಖಂಡ ಬಸವಾಪುರ ರಂಗನಾಥ ನಾಯಕ ಸೇರಿದಂತೆ ಯುವ ಮುಖಂಡರು ಹೋರಾಟಗಾರರು ಇದ್ದರು.