ಬಳ್ಳಾರಿ: ಉಕ್ರೇನ್ನಿಂದ ತಯಬ್ ಕೌಸರ್, ಶಕೀಬ್, ಸಕೀಮ್, ಸಾಲೋಮನ್ ಎಂಬ ವಿದ್ಯಾರ್ಥಿಗಳು ಬಳ್ಳಾರಿಗೆ ಹಿಂತಿರುಗಿದ್ದಾರೆ. ಇವರೆಲ್ಲರೂ ಅಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ.
ಉಕ್ರೇನ್ನಿಂದ ಭಾರತಕ್ಕೆ ಮರಳಲು ಹೊರಟಿದ್ದ ಬಳ್ಳಾರಿ ಮೂಲದ ವಿದ್ಯಾರ್ಥಿಗಳನ್ನು ರಷ್ಯಾ ಯೋಧರು ಅಡ್ಡಗಟ್ಟಿ ತಲೆಗೆ ಬಂದೂಕು ಹಿಡಿದರು. ತಕ್ಷಣವೇ ಜಾಗೃತರಾದ ವಿದ್ಯಾರ್ಥಿಗಳು, ‘ನಾವು ಭಾರತದ ಪ್ರಜೆಗಳು. ಬೇಕಿದ್ದರೆ ನಮ್ಮ ಪಾಸ್ಪೋರ್ಟ್ ನೋಡಿ’ ಎಂದು ಹೇಳಿದರು. ಆನಂತರ ರಷ್ಯಾ ಯೋಧರು ಅವರನ್ನು ಬಿಟ್ಟು ಕಳುಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾವಿನ ದವಡೆಯಿಂದ ಪಾರಾಗಿ ಬಂದ ತಮ್ಮ ಭಯಾನಕ ಅನುಭವಗಳನ್ನು ಅವರೊಂದಿಗೆ ಹಂಚಿಕೊಂಡರು.