ಚೆನ್ನೈ: ಮಹಾನಗರದ ಮೇಯರ್ ಆಗಿ ದಲಿತ ಸಮುದಾಯದ ಪ್ರಿಯಾ ಎಂಬ ಮಹಿಳೆ ಅಧಿಕಾರ ವಹಿಸಿಕೊಂಡಿದ್ದಾರೆ. 29 ವರ್ಷ ವಯಸ್ಸಿನವರಾದ ಅವರು ಮೇಯರ್ ಆದ ಅತ್ಯಂತ ಕಿರಿಯ ವ್ಯಕ್ತಿ ಎಂಬ ದಾಖಲೆಯನ್ನು ಹೊಂದಿದ್ದಾರೆ. ಅವರು ಚೆನ್ನೈ ಮೇಯರ್ ಹುದ್ದೆಯನ್ನು ಅಲಂಕರಿಸಿದ ಮೂರನೇ ಮಹಿಳೆಯಾಗಿದ್ದಾರೆ.
29 ವರ್ಷಗಳ ಆರ್. ಪ್ರಿಯಾ ಅವರು ಇತ್ತೀಚೆಗಷ್ಟೇ ನಡೆದ ಮುನ್ಸಿಪಲ್ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಪರವಾಗಿ ನಿಂತು ಕೌನ್ಸಿಲರ್ ಆಗಿ ಭಾರಿ ಬಹುಮತದೊಂದಿಗೆ ಗೆದ್ದಿದ್ದರು.
ಚೆನ್ನೈನ ಮೇಯರ್ ಆಗಿ, ನಾನು ನನ್ನ ಕೆಲಸವನ್ನು ಮಾಡುತ್ತೇನೆ. ಜನರು ಮತ್ತು ನನ್ನ ಪಕ್ಷದ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ನನಗೆ ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರಿಯಾ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.