ನಕಲು ಮಾಡಿ ಸಿಲುಕಿದ್ದರಿಂದ ಡಿಬಾರ್ – ಆತ್ಮಹತ್ಯೆಗೆ ಶರಣಾದ 21 ವರ್ಷದ ವಿದ್ಯಾರ್ಥಿನಿ

ಕೋರಮಂಗಲ:  21 ವರ್ಷದ ಭವ್ಯ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮೃತ ಭವ್ಯ ಕೋರಮಂಗಲದ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ದೊಮ್ಮಲೂರು ಬ್ರಿಡ್ಜ್ ಬಳಿಯ ಮಹಿಳಾ ಪಿಜಿಯಲ್ಲಿ ವಾಸವಾಗಿದ್ದಳು. ಶುಕ್ರವಾರ ಪಿಜಿಯ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪರೀಕ್ಷೆ ವೇಳೆ ಭವ್ಯ ನಕಲು ಮಾಡಿ ಸಿಲುಕಿದ್ದರಿಂದ ಡಿಬಾರ್ ಮಾಡಲಾಗಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಇದರಿಂದ ನೊಂದಿದ್ದ ಭವ್ಯ ಸೋದರಿ ದಿವ್ಯಾಗೆ ಕರೆ ಮಾಡಿ ನೋವು ಹಂಚಿಕೊಂಡಿದ್ದಳು. ಡಿಬಾರ್ ಮಾಡಿದ್ದಾರೆ, ನಾನು ಬದುಕೋದಿಲ್ಲ ಎಂದು ಹೇಳಿದ್ದಳಂತೆ.

ಭವ್ಯಾಳ ಮಾತು ಕೇಳಿದ ಸೋದರಿ ದಿವ್ಯಾ ತಂದೆಗೆ ವಿಷಯ ತಿಳಿಸಿದ್ದಳು. ಆದ್ರೆ ಅಷ್ಟರಲ್ಲಿ ಭವ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊನೆಯದಾಗಿ ಭವ್ಯ ಕಳುಹಿಸಿರುವ ವಾಟ್ಸಪ್ ಸಂದೇಶ ಲಭ್ಯವಾಗಿದೆ. ಘಟನೆ ಸಂಬಂಧ ಜೀವನ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Discover more from Valmiki Mithra

Subscribe now to keep reading and get access to the full archive.

Continue reading