ತುಮಕೂರು: ತನ್ನಷ್ಟಕ್ಕೆ ತಾನು ಜನರ ಅಭಿವೃದ್ಧಿಗಾಗಿ ಸಹಾಯ ಮಾಡುತ್ತಾ, ಪ್ರಾಮಾಣಿಕ ಸೇವೆಯನ್ನು ತಳಮಟ್ಟದಿಂದ ಮಾಡುತ್ತಾ, ಬಡವರ ಸೇವೆಗಾಗಿ ಸದಾ ಮುಂದೆ ಬರುವಂತಹ ಸ್ನೇಹಜೀವಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಾಜ್ಯಾಧ್ಯಕ್ಷರು ಹಾಗೂ ವಾಲ್ಮೀಕಿ ವಾಹಿನಿ ಪತ್ರಿಕೆ ಸಂಪಾದಕರಾದ ಸಿರಿಗೇರಿ ತಿಪ್ಪೇಶ್ ಅವರಿಗೆ ಸಮಾಜಸೇವೆಯಲ್ಲಿ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಗಿದೆ.
ಸಿರಿಗೇರಿ ತಿಪ್ಪೇಶ್ ಅವರು ಸಮಾಜಸೇವೆಯಲ್ಲಿ ಪಟ್ಟ ಶ್ರಮ ಅಪಾರ. ಕೊರನ ಸಮಯದಲ್ಲೂ ಕೂಡ ನಿರ್ಗತಿಕರಿಗೆ ಸಹಾಯವನ್ನು ನೀಡಿದ್ದರು.