ಮಾನ್ವಿ: ಇಂದು ನಗರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ” 5″ ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವದರ ಮೂಲಕ ಕಾರ್ಯಕ್ರಮವನ್ನು, “ಮಾನ್ವಿ ಶಾಸಕರದ ರಾಜಾ ವೆಂಕಟಪ್ಪ ನಾಯಕ ದೊರೆ ಅವರು ಉದ್ಘಾಟಿಸಿದರು.
ನಂತರ ಮಾತನಾಡಿ ಅವರು, ಪೋಲಿಯೋ ಮುಕ್ತ ಭಾರತವನ್ನು ನಿರ್ಮಿಸಲು ಪ್ರತಿಯೊಬ್ಬರು ಕೈ ಜೋಡಿಸೋಣ, ಈ ಜವಾಬ್ದಾರಿಯನ್ನು ತಪ್ಪದೇ ಪಾಲಿಸಬೇಕು ಪ್ರತಿಯೊಬ್ಬ ಪೋಷಕರು ಜವಾಬ್ದಾರಿಯಾಗಿದ್ದು, “ಐದು ವರ್ಷದ ಮಕ್ಕಳಿಗೆ ನಿಮ್ಮ ಹತ್ತಿರದ ಆಸ್ಪತ್ರೆ ಹಾಗೂ ಅಂಗನವಾಡಿ ಹಾಗೂ ನಿಗದಿಪಡಿಸಿದ ಪೋಲಿಯೋ ಭೂತಗಳಲ್ಲಿ ಪೋಲಿಯೋ ಹನಿಗಳನ್ನು ಹಾಕಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದ್ದು, “ಜವಾಬ್ದಾರಿಯನ್ನು ತಪ್ಪದೇ ಪಾಲಿಸಿ ಹಾಗೂ ತಮ್ಮ ಅಕ್ಕ ಪಕ್ಕದವರಿಗೂ ಹಾಗೂ ಸಂಬಂಧಿಕರಿಗೂ ತಿಳಿಸಿ ಎಂದರು.
ಪೋಲಿಯೋ ಮುಕ್ತ ಭಾರತವನ್ನು ನಿರ್ಮಿಸಲು ಪ್ರತಿಯೊಬ್ಬರು ಕೈಜೋಡಿಸೋಣ ಎಂದು ಶಾಸಕರು ಕರೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪುರಸಭೆ ಹಿರಿಯ ಸದಸ್ಯರಾದ ಶ್ರೀ ರಾಜಾ ಮಹೇಂದ್ರ ನಾಯಕ ದೊರೆ ಹಾಗೂ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳು ಹಾಗೂ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳು, ತಾಲೂಕು ಆಡಳಿತದ ಎಲ್ಲಾ ಅಧಿಕಾರಿಗಳು ಹಾಗೂ ಮಾನ್ವಿ ಪುರಸಭೆ ಎಲ್ಲಾ ಸದಸ್ಯರು ಜೆಡಿಎಸ್ ಹಿರಿಯ ಮುಖಂಡರು ಹಾಗೂ ಯುವ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು.