ಚಿಕ್ಕಬಳ್ಳಾಪುರ: ಶಿವೋತ್ಸವ ಮಾಡುವುದರಿಂದ ಜಾಗತಿಕ ಪರಂಪರೆಯ ಸೃಷ್ಟಿಗೆ ನಾಂದಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾಕ್ಟರ್ ಸುಧಾಕರ್ ಹೇಳಿದ್ದಾರೆ.
ಸಾವಿರ ವರ್ಷಗಳ ಇತಿಹಾಸ ಈ ಭಾಗದಲ್ಲಿ ಇದೆ ಪ್ರಥಮ ಬಾರಿಗೆ ಹಲವು ರಾಜವಂಶಗಳು ಇಂದ ಕೊಡುಗೆ ಪಡೆದ ಹಿನ್ನೆಲೆ ಹೊಂದಿರುವ ಶ್ರೀ ಭೋಗನಂದೀಶ್ವರ ದೇವಸ್ಥಾನವು ನಮ್ಮ ನಾಡಿನ ಪರಂಪರೆಯನ್ನು ಮುಂದುವರೆಸುವ ಕೇಂದ್ರವಾಗಿ ಬೆಳೆಯುತ್ತಿದೆ. ನಂದಿಬೆಟ್ಟದಲ್ಲಿ ರೂಪ್ ವೇ ನಿರ್ಮಾಣದಿಂದಾಗಿ ಈ ಕ್ಷೇತ್ರ ಕೆಲವೇ ವರ್ಷಗಳಲ್ಲಿ ಜಗತ್ ಸಿದ್ಧಿ ಪಡೆಯಲಿದೆ. ಜೊತೆಗೆ ಮಹಾ ಶಿವರಾತ್ರಿಯ ಪ್ರಯುಕ್ತ ನಡೆಯುವ ಶಿವೋತ್ಸವ ಆಚರಣೆ ಕೂಡ ಜಾಗತಿಕ ಮಟ್ಟದಲ್ಲಿ ಪ್ರವಾಸಿಗರ ಗಮನಸೆಳೆಯಲಿದೆ. ಧರ್ಮ ಸಂಸ್ಕೃತಿಯ ರಕ್ಷಣೆಯೊಂದಿಗೆ ಮುಂದಿನ ಪೀಳಿಗೆಯ ಪರಂಪರೆಯನ್ನು ಗೌರವಿಸಿ ಮುಂದುವರಿಸುವ ಕಾರ್ಯಕ್ಕೆ ಈ ಬಾರಿ ಶಿವೋತ್ಸವ ವೇದಿಕೆಯಾಗಲಿದೆ. ಮುಂದಿನ ವರ್ಷದಿಂದ ಹಂಪಿ ಉತ್ಸವ ಹಾಗೂ ಮೈಸೂರು ದಸರಾ ಮಾದರಿಯಲ್ಲಿ ಉತ್ಸವ ಆಚರಿಸಲು ಮುಖ್ಯಮಂತ್ರಿಗಳಿಗೆ ಚರ್ಚಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಳೆ ಮಾರ್ಚ್ 1ರಂದು ಸಂಜೆ 6 ಗಂಟೆಯಿಂದ ಮರುದಿನ ಮುಂಜಾನೆ 6 ಗಂಟೆವರೆಗೆ ಭೋಗನಂದೀಶ್ವರ ದೇವಾಲಯದಲ್ಲಿ ಶಿವೋತ್ಸವ ಆಚರಣೆಯಾಗಲಿದೆ ದೇವಾಲಯದಿಂದ ರಥೋತ್ಸವ ನಡೆಯಲಿದೆ. ದೇಗುಲಕ್ಕೆ ವಿದ್ಯುತ್ ದೀಪಾಲಂಕಾರ ಹೂಗಳ ಅಲಂಕಾರ ಮಾಡಲಿದ್ದು, ರುದ್ರಾಭಿಷೇಕ ಸೇರಿ ವಿಶೇಷ ಪೂಜೆ ನಡೆಯಲಿದೆ. ಶಿವ ಭಕ್ತಿ ಭಾವ ಬೆರೆತ ಸಂಗೀತ ಕಾರ್ಯಕ್ರಮ ನಾಟಕ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದು. ಖ್ಯಾತ ಗಾಯಕರಾದ ಶಂಕರ್ ಮಹದೇವನ್ ಸೀದ್ ಶ್ರೀರಾಮನ್ ರಘು ದೀಕ್ಷಿತ್, ಅನನ್ಯ ಭಟ್ ಖ್ಯಾತ ನೃತ್ಯಪಟು ಲಕ್ಷ್ಮಿ ಗೋಪಾಲಸ್ವಾಮಿ ಹಾಸ್ಯೋತ್ಸವ ಪ್ಪೋ ಕೃಷ್ಣೇಗೌಡ ಮತ್ತು ತಂಡ ಮೂವತ್ತಕ್ಕೂ ಹೆಚ್ಚು ತಂಡಗಳು ಪ್ರದರ್ಶಿಸುವ ವಿವಿಧ ಕಲಾ ತಂಡಗಳು ಭಾಗವಹಿಸಿ ಜನಸಾಮಾನ್ಯರನ್ನು ರಂಜಿಸಲಿದೆ. ದೇವಸ್ಥಾನಕ್ಕೆ ಬರಲು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ವಿಶೇಷ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು.