ತುಮಕೂರು: ಶಾಸಕ ಜಿ. ಬಿ ಜ್ಯೋತಿಗಣೇಶ್ ಉಕ್ರೇನ್ ನಗರದಲ್ಲಿ ಸಿಲುಕಿರುವ ತುಮಕೂರಿನ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಪೋಷಕರಿಗೆ ಸಾಂತ್ವಾನ ಹೇಳಿ ಹಗಲಿರುಳೂ ಅವರ ನೆರವಿಗೆ ನಿಂತಿದ್ದಾರೆ.
ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ದ ನಡೆಯುತ್ತಿದೆ,ವಿದ್ಯಾಭ್ಯಾಸಕ್ಕೆ ಉಕ್ರೇನ್ ದೇಶಕ್ಕೆ ತೆರಳಿರುವ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರೆ. ಇದರಲ್ಲಿ ಕರ್ನಾಟಕ ಹಾಗೂ ತುಮಕೂರಿನ ಹಲವು ವಿದ್ಯಾರ್ಥಿಗಳಿದ್ದಾರೆ, ಉಕ್ರೇನ್ ನಲ್ಲಿರುವ ತುಮಕೂರು ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕಿದ ಶಾಸಕ ಜಿ. ಬಿ ಜ್ಯೋತಿಗಣೇಶ್ ತಮ್ಮ ಕಾರ್ಯಭಾರದ ಒತ್ತಡದ ನಡುವೆಯೂ ವಿದ್ಯಾರ್ಥಿಗಳ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿ ಧೈರ್ಯ ತುಂಬಿದ್ದಾರೆ.
ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಂತಹ ನಾಯಕರ ದಿಟ್ಟ ಆಡಳಿತವಿದೆ,ರಷ್ಯಾ ಹಾಗೂ ಉಕ್ರೇನ್ ದೇಶಗಳ ರಾಯಭಾರ ಕಚೇರಿಯೊಂದಿಗೆ ಮಾತನಾಡಿ ಈಗಾಗಲೇ ಹಲವು ವಿದ್ಯಾರ್ಥಿಗಳನ್ನು ಅಲ್ಲಿಂದ ಕರೆತರುವ ಪ್ರಯತ್ನ ಮಾಡಲಾಗಿದೆ. ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷತವಾಗಿ ಕರೆತರಲು ಸರ್ಕಾರ ಬದ್ದವಾಗಿದೆ ಎಂದರು.ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳನ್ನು ತುಮಕೂರಿಗೆ ಕರೆತರಲು ಶಾಸಕರು ಕಾರಿನ ವ್ಯವಸ್ತೆಯನ್ನು ಸಹ ಮಾಡಿದ್ದಾರೆ.