ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲೂಕು ಕಸಬಾ ಹೋಬಳಿ ಗುಂಡ್ಲಹಳ್ಳಿ ಗ್ರಾಮದ ಮಂಜುನಾಥರೆಡ್ಡಿ ಮತ್ತು ಶಿವಾರೆಡ್ಡಿಗೆ ಸೇರಿದ ಹುಲ್ಲಿನ ಮೂರು-ನಾಲ್ಕು ಮನೆಗಳ ಅಕ್ಕ ಪಕ್ಕದಲ್ಲಿ ಹಾಕಿಕೊಂಡಿದ್ದು ಇಂದು ಮಂಜುನಾಥರೆಡ್ಡಿ ತನ್ನ ಮನೆಯ ಪಕ್ಕದಲ್ಲಿ ಧನದ ಕೊಟ್ಟಿಗೆ ಕಾಮಗಾರಿಯನ್ನು ಮಾಡುತ್ತಿದ್ದ ಸಂಧಭ೯ದಲ್ಲಿ ಕಬ್ಬಿಣದ ಕಡ್ಡಿಗಳನ್ನು ವೆಲ್ಡಿಂಗ್ ಮಾಡುವಾಗ ಸಮಯ ಪ್ರಜ್ಞೆಯಿಲ್ಲದ ಕಾರಣ ಉರಿಯುವ ಬಿಸಿಲಲ್ಲಿ ಕಬ್ಬಿಣದ ಚೂರುಗಳು ತನ್ನ ಹುಲ್ಲಿನ ಬಣಿವೆಗೆ ತಗುಲಿದ ಪರಿಣಾಮ ಬೆಂಕಿ ವ್ಯಾಪಿಸಿ ನಂದಿಸಲು ಅರ ಸಾಹಸ ಪಟ್ಟರು ಸಾಧ್ಯವಾಗದೆ ಪಕ್ಕದ ಶಿವಾರೆಡ್ಡಿಗೆ ಸೇರಿದಬಣವೆಗಳಿಗೆ ವ್ಯಾಪಿಸಿ ಸಂಪೂರ್ಣವಾಗಿ ಜಾನುವಾರುಗಳಿಗೆ ಸಂಗ್ರಹಮಾಡಿರುವ ಹುಲ್ಲಿನ ಬಣವೆಗಳು ಬಸ್ಮವಾಗಿವೆ ಸ್ಥಳಕ್ಕೆ ಅಗ್ನಿಶಾಮಕ ದಳದ ಎರಡೂ ವಾಹನ ಸಿಬ್ಬಂದಿ ಮತ್ತು ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ತೊಡಗಿಸಿಕೊಂಡು ಹೆಚ್ಚಿನ ಅನಾಹುತವನ್ನುತಪ್ಪಿಸಸಿದರು ಸ್ಥಳಕ್ಕೆ ತಾಲ್ಲೂಕು ತಹಶೀಲ್ದಾರ್ ಸಿಂಗ್ಬತುಲ್ಲಾ ಬೇಟಿ ನೀಡಿ ಆಗಿರುವ ಅನಾಹುತ ಬಗ್ಗೆ ಮಾಹಿತಿ ಪಡೆದು ಅಚಾತುರ್ಯವಾಗಿ ನಡೆದ ಘಟನೆಯಾಗಿದೆ ಎಂದು ರೈತರಿಗೆ ತಿಳಿಸಿ ಸಕಾ೯ರದಿಂದ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.