ಬೆಂಗಳೂರು: ವಾಲ್ಮೀಕಿ ಸಮುದಾಯದ ಸುಮಾರು ಮೂರು ದಶಕಗಳ ಕಾಲದ ಸಮಸ್ಯೆಯಾಗಿರುವ ಮೀಸಲಾತಿ ಹೆಚ್ಚಳ ಹಾಗೂ ನಕಲಿ ಜಾತಿ ಪತ್ರಗಳ ಅವಳಿ ತಡೆಗಟ್ಟುವಂತೆ ಶ್ರೀ ಪರಮಪೂಜ್ಯ ವಾಲ್ಮೀಕಿ ಸ್ವಾಮೀಜಿಗಳು ಹೋರಾಟ ನಡೆಸುತ್ತೀದ್ದು ಇದಕ್ಕೆ ಸಿದ್ದು ಬಂಡಿ ಜೆಡಿಎಸ್ ಮುಖಂಡ ಬೆಂಬಲ ಸೂಚಿಸಿದ್ದಾರೆ.
ನೀವು ನಡೆಸುತ್ತಿರುವ ಮೀಸಲಾತಿ ಹೋರಾಟಕ್ಕೆ ನಾವು ಕೂಡ ಬೆಂಬಲವನ್ನು ಸೂಚಿಸುತ್ತೇವೆ, ಈ ಹೋರಾಟ ಕಾರ್ಯ ರೂಪಕ್ಕೆ ಬರದೆ ಇದ್ದರೆ ನಾವು ಕೂಡ ಮುಂದಿನ ದಿನಗಳಲ್ಲಿ ಹೋರಾಟದಲ್ಲಿ ಭಾಗಿಯಾಗುತ್ತೇವೆ ಎಂದು ಜೆಡಿಎಸ್ ಮುಖಂಡ ಸಿದ್ದು ಬಂಡಿ 15 ದಿನಗಳಿಂದ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಶ್ರೀ ಪರಮಪೂಜ್ಯ ವಾಲ್ಮೀಕಿ ಗುರುಗಳಿಗೆ ಆಶ್ವಾಸನೆ ನೀಡಿದರು.