ನಮ್ಮ ಯೋಧರ ಬಳಿ ಹಳೆಯ ಶಸ್ತ್ರಾಸ್ತ್ರಗಳೇ ಉಳಿಯುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇಕೆ ..?

ನವದೆಹಲಿ: ಭಾರತದಲ್ಲಿ ಮಾಹಿತಿ ತಂತ್ರಜ್ಞಾನದ ನಿಪುಣತೆ ಅತಿದೊಡ್ಡ ಶಕ್ತಿ. ಇದನ್ನು ನಾವು ನಮ್ಮ ರಕ್ಷಣಾ ಕ್ಷೇತ್ರದಲ್ಲಿ ಬಳಕೆ ಮಾಡಬೇಕು. ತನ್ಮೂಲಕ ರಾಷ್ಟ್ರೀಯ ಭದ್ರತಾ ಖಾತ್ರಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿದೇಶಗಳಿಂದ ಶಸ್ತ್ರಾಸ್ತ್ರಗಳ ಆಮದು ಪ್ರಕ್ರಿಯೆಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಅವುಗಳನ್ನು ಖರೀದಿಸಿ ತಂದು ಸೇನೆಗೆ ಒದಗಿಸುವ ವೇಳೆಗೆ ಆಧುನಿಕ ಶಸ್ತ್ರಾಸ್ತ್ರಗಳು ಮಾರುಕಟ್ಟೆಯಲ್ಲಿರುತ್ತವೆ. ನಮ್ಮ ಯೋಧರ ಬಳಿ ಹಳೆಯ ಶಸ್ತ್ರಾಸ್ತ್ರಗಳೇ ಉಳಿಯುತ್ತವೆ. ಇದಕ್ಕೆ ಪರಿಹಾರವಾಗಿ ಆತ್ಮ ನಿರ್ಭರ್ ಭಾರತ್ ದೇಶೀಯ ಉತ್ಪಾದನೆಗೆ ಆದ್ಯತೆ ನೀಡುತ್ತಿದೆ.

ರಕ್ಷಣಾ ಇಲಾಖೆಯ ಶೇ.70ರಷ್ಟು ಬಜೆಟ್ ಅನುದಾನವನ್ನು ದೇಶೀಯ ಉತ್ಪಾದನೆಗಾಗಿಯೇ ಮೀಸಲಿಡಲಾಗಿದೆ ಎಂದು ಅವರು ಹೇಳಿದ್ದಾರೆ. 2022-23ನೇ ಸಾಲಿನ ಕೇಂದ್ರದ ಆಯವ್ಯಯ, ಸಂಶೋಧನೆ, ವಿನ್ಯಾಸ ಮತ್ತು ಅಭಿವೃದ್ಧಿಯ ಪೂರಕ ವಾತಾವರಣಕ್ಕೆ ವ್ಯಾಪಕ ಅವಕಾಶಗಳನ್ನು ಸೃಷ್ಟಿಸಿದೆ. ಈವರೆಗೂ 200ಕ್ಕೂ ಹೆಚ್ಚು ಕಂಪನಿಗಳು ಶಸ್ತ್ರಾಸ್ತ್ರಗಳನ್ನು ತಯಾರು ಮಾಡುತ್ತಿವೆ ಎಂದು ಹೇಳಿದರು.

ಹೊಸದಾಗಿ ಪ್ರಕಟಿಸಲಾದ ಯೋಜನೆಗಳಲ್ಲಿ 54 ಸಾವಿರ ಕೋಟಿ ದೇಶೀಯ ಶಸ್ತ್ರಾಸ್ತ್ರಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಸುಮಾರು 4.5 ಲಕ್ಷ ಕೋಟಿ ವೆಚ್ಚದಲ್ಲಿ ವಿವಿಧ ಹಂತಗಳಲ್ಲಿ ಶಸ್ತ್ರಾಸ್ತ್ರಗಳ ಖರೀದಿಗೆ ನಿರ್ಧರಿಸಲಾಗಿದೆ. 3ನೇ ಹಂತದ ಪ್ರಕ್ರಿಯೆಗಳು ಚಾಲನೆಯಲ್ಲಿವೆ ಎಂದರು.

Discover more from Valmiki Mithra

Subscribe now to keep reading and get access to the full archive.

Continue reading