ರಾಜನಹಳ್ಳಿ: ವಾಲ್ಮೀಕಿ ಗುರುಪೀಠದ ಸ್ವಾಮೀಜಿಗಳಾದ ಶ್ರೀ ಪುಣ್ಯನಂದ ಶ್ರೀಗಳು ನಾಗಮೋಹನ್ ದಾಸ್ ವರದಿಯಂತೆ ಶೇಕಡಾ 7.5 ಮೀಸಲಾತಿಗಾಗಿ ಫ್ರೀಡಂ ಪಾರ್ಕಿನಲ್ಲಿ ಧರಣಿ ಸತ್ಯಗ್ರಹ ಕುಳಿತು ಇಂದಿಗೆ 12 ದಿನವಾಗಿದ್ದು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಬಹಳ ಅಚ್ಚರಿ ಮೂಡಿಸಿದೆ.
ಇದರ ಜೊತೆಯಲ್ಲಿ ಶಾಸಕ ರಾಜೂಗೌಡ ಮತ್ತು ಸತೀಶ್ ಜಾರಕಿಹೊಳಿ ಇಬ್ಬರು ದಿಡೀರನೇ ಫ್ರೀಡಂ ಪಾರ್ಕ್ ಗೆ ಭೇಟಿ ಕೊಟ್ಟು ಶ್ರೀಗಳ ಜೊತೆಯಲ್ಲಿ ಕೆಲವು ನಿಮಿಷಗಳ ಕಾಲ ಗೌಪ್ಯ ಸಭೆ ನಡೆಸಿರುವದು ಅಲ್ಲಿ ನೆರೆದಿದ್ದ ಪ್ರತಿಭಟನಾಕಾರರಿಗೆ ಒಂದು ರೀತಿಯ ಅಚ್ಚರಿಯನ್ನು ಮೂಡಿಸಿದ್ದು ಶುಭ ಸಂದೇಶ ಬರುವುದೇನೋ ಎಂಬಂತೆ ಕಾದು ಕುಳಿತಿದ್ದರು.
ಆದರೆ ಶ್ರೀಗಳು ಸಭೆಯ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಂಡಿರುವುದು ಸಮುದಾಯದ ಜನರಲ್ಲಿ ಕಳವಳ ಮೂಡಿಸಿದೆ ಇದೆ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಎಸ್ ಟಿ ಮೋರ್ಚಾ ಅಧ್ಯಕ್ಷರು ತಿಪ್ಪರಾಜು ಹವಾಲ್ದಾರ್. ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷರಾದ ಬಾಕ್ಸರ್ ನಾಗರಾಜು.ಪ್ರಧಾನ ಕಾರ್ಯದರ್ಶಿ ಗಳಾದ ನರೇಂದ್ರ ಕುಮಾರ್ ಮತ್ತು ಮಧುಕುಮಾರ್. ಜಿಲ್ಲಾ ಕಾರ್ಯದರ್ಶಿಗಳಾದ ರವಿ. ಕೆ. ಎಸ್ ಮತ್ತು ಮಂಜುನಾಥ್. ಜನಾರ್ಧನ್ ಹಾಗೂ ಬೆಂಗಳೂರು ಕೇಂದ್ರ ಭಾಗದ ಜಿಲ್ಲಾ ಅಧ್ಯಕ್ಷರು ಶಿವಕುಮಾರ್ ರವರುಗಳು ಶ್ರೀಗಳನ್ನು ಭೇಟಿ ಮಾಡಿ ನಾವುಗಳು ನಿಮ್ಮ ಜೊತೆ ಇದ್ದೇವೆ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ತಿಳಿಸಿ ನಮ್ಮ ಬಿಜೆಪಿ ಎಸ್ ಟಿ ಮೋರ್ಚಾ ವತಿಯಿಂದ ಸರ್ಕಾರಕ್ಕೆ ಒತ್ತಡ ಹಾಕಿರುವ ಬಗ್ಗೆ ವಿವರಿಸಿದರು.