ಬೆಂಗಳೂರು: ರೇಡಿಯೋ ಜಾಕಿ ರಚನಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ರೆಡಿಯೋ ಮಿರ್ಚಿಯಲ್ಲಿ ಆರ್‌ಜೆ ಆಗಿದ್ದ ರಚನಾ ತಮ್ಮ ಮಾತುಗಳಿಂದಲೇ ಜನರ ಮನ ಗೆದ್ದಿದ್ದರು.
ಜೆಪಿ ನಗರದ ಪ್ಲಾಟ್‌ನಲ್ಲಿ ರಚನಾಗೆ ಎದೆ ನೋವು ಕಾಣಿಸಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ನಿಧನರಾಗಿದ್ದಾರೆನ್ನಲಾಗಿದೆ. ತಮ್ಮ ಮಾತಿನ ಮೂಲಕವೇ ಕನ್ನಡಿಗರ ಹೃದಯ ಗೆದ್ದಿದ್ದ ಮುದ್ದು ಮುಖದ ರಚನಾಗೆ 39 ವರ್ಷ ವಯಸ್ಸಾಗಿತ್ತು.
ರೇಡಿಯೋ ಜಾಕಿ ಕೆಲಸ ಬಿಟ್ಟ ಬಳಿಕ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು ಎನ್ನಲಾಗಿದೆ. ಕಳೆದು ಕೆಲವು ದಿನಗಳಿಂದ ಖಿನ್ನತೆಗೂ ಒಳಗಾಗಿದ್ದರೆಂಬ ಸುದ್ದಿಯೂ ಹರಿದಾಡಿದೆ. ರಚನಾ ಸಾವು ರೇಡಿಯೋ ಸ್ನೇಹಿತರಿಗೆ ಶಾಕ್ ತಂದಿದೆ. ದೇಹವನ್ನು ಜೋಪಾನವಾಗಿ ಕಾಪಾಡಿಕೊಂಡಿದ್ದ ರಚನಾ ಸದಾ ಫಿಟ್ ನೆಸ್ ಬಗ್ಗೆ ಗಮನ ಹರಿಸುತ್ತಿದ್ದು, ಹೃದಯಾಘಾತಕ್ಕೆ ಬಲಿಯಾಗಿರುವುದು ಆಘಾತ ಕೊಟ್ಟಿದೆ.