ರಾಜ್ಯದ ಮೊದಲ ವಾಲ್ಮೀಕಿ ಸಮಾಜದ ಮಹಿಳಾ IAS, ಅಧಿಕಾರಿ.ರಾಜ್ಯದ ಮೊದಲ ಮಹಿಳಾ ಡಾಕ್ಟರ್. ಆಗಿ ಸುದೀರ್ಘ 33 ವರ್ಷಗಳ ಕಾಲ ವಿವಿದ ಇಲಾಖೆಗಳಲ್ಲಿ ದಕ್ಷ ಮತ್ತು ಪ್ರಾಮಾಣಿಕ ವಾಗಿ ಸೇವೆ ಸಲ್ಲಿಸಿ ವಾಲ್ಮೀಕಿ ಸಮುದಾಯದ ಮೊದಲ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸಿ ದಕ್ಷ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾದ ಶ್ರೀಮತಿ ಡಾ. ಎನ್, ನಾಗಲಾಂಭಿಕ ದೇವಿ, ರವರು ನಿವೃತ್ತಿ ಹೊಂದಿದ್ದಾರೆ.
ಇದರ ಸಲುವಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅವರು ಸಾಗಿಬಂದ ಹಾದಿ ಕಾರ್ಯನಿರ್ವಹಣೆಯ ಹೆಜ್ಜೆ ಗುರುತುಗಳನ್ನ ಸ್ಮರಿಸಿ ನೂರಾರು ಅಧಿಕಾರಿಗಳು ಮತ್ತು ಜೀವಪರ ಜನಪರ ಹೋರಾಟಗಾರರ ಸಮಕ್ಷಮದಲ್ಲಿ, ಅತ್ಯಂತ ಗೌರವಯುತವಾಗಿ ಬೀಳ್ಕೊಡುಗೆ ನೀಡಿದರು.
ಎಂದಿನಂತೆ ವಿಶ್ರಾಂತಿ ಜೀವನ ಹೆಚ್ಚು ಸಂತೋಷದಾಯಕವಾಗಿರಲೆಂದು ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ(ರಿ)ರಾಜ್ಯದ್ಯಾಕ್ಷರಾದ ಸಿರಿಗೆರೆ ತಿಪ್ಪೇಶ್,
ಕೆಪಿಸಿಸಿ ಕಾರ್ಯದರ್ಶಿ ಶುಭವೇಣುಗೋಪಾಲ್, ಸಾಲುಮರದ ತಿಮ್ಮಕ್ಕನವರ ಮಗನಾದ ಉಮೇಶ್ ವನಸಿರಿ ಜಿತೇಂದ್ರಾಕುಮಾರ್ , ನಾಗೇಂದ್ರ ಪಾವಗಡ ಹಾಗೂ ಸಂಘಟನಾ ಕಾರ್ಯದರ್ಶಿ ಬಾಬು ಹಾಗೂ ಪ್ರಧಾನ ಕಾರ್ಯದರ್ಶಿ ಧರಣಿ ಮದಕರಿ ಶುಭಕೋರಿದರು.